ಪರಿಸರ ಅಧಿಕಾರಿ ದಾಳಿ-ಪಿಓಪಿ ಗಣೇಶ ವಿಗ್ರಹಗಳನ್ನು ವಶಕ್ಕೆ

0
363

ಬಳ್ಳಾರಿ /ಹೊಸಪೇಟೆ:ನಾಳೆ ಆಚರಿಸಲಿರುವ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹೊಸಪೇಟೆಯ ವಿವಿಧೆಡೆ ವ್ಯಾಪಕ ದಾಳಿ ನಡೆಸಿರುವ ಅಧಿಕಾರಿಗಳು ಪರಿಸರಕ್ಕೆ ಮಾರಕವಾದ ಗಣಪತಿ ಮೂರ್ತಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ನಗರಸಭೆ ಪರಿಸರ ವಿಭಾಗದ ಅಧಿಕಾರಿ ಶಿಲ್ಪಶ್ರೀ ಸಿಬ್ಬಂದಿಗಳೊಂದಿಗೆ ಇಂದು ನಗರದ ಚಪ್ಪರದಹಳ್ಳಿ, ಹಂಪಿ ರಸ್ತೆ, ಉದ್ಯೋಗ ಪೆಟ್ರೋಲ್ ಬಂಕ್ ಬಳಿ, ರಘು ಗಣೇಶ್ ಸ್ಟಾಲ್ ಸೇರಿದಂತೆ ಹಲವೆಡೆ ದಾಳಿ ನಡೆಸಿ ಪಿ.ಓ.ಪಿ.ಗಣೇಶ ಮೂರ್ತಿಗಳನ್ನು ವಶಕ್ಕೆ ತೆಗೆದುಕೊಂಡು ಮಾರಾಟಗಾರರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಈವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ಮುಂಚೆಯೇ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದೇವೆ. ಪ್ಲಾಸ್ಟಿಕ್ ಆಫ್ ಪ್ಯಾರೀಸ್ ಗಣಪತಿಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ.

ಕರ್ನಾಟಕದಾದ್ಯಂತ ಇಂತಹ ಗಣಪತಿ ನಿರ್ಮಾಣ ಬ್ಯಾನ್‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಸಾಯನಿಕ ಪದಾರ್ಥಗಳು, ಬಣ್ಣಗಳಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ‌ ಬೀರಲಿದೆ.

ಆರಂಭದಲ್ಲಿ ಜನ್ರು ವಿರೋಧ ವ್ಯಕ್ತಪಡಿಸಿದರಾದರೂ ಅವರಲ್ಲೂ ಈಗ ಜಾಗೃತಿ ಮೂಡಿದೆ. ನಗರದಲ್ಲೀಗ ಶೇ 60 ರಷ್ಟು ಪಿಓಪಿ ಗಣೇಶ ಮಾರಾಟ ಕಡಿಮೆ ಆಗಿದೆ. ಪರಿಸರಕ್ಕೂ, ನೀರಿಗೂ ಹಾನಿಕರವಾದ ಇಂತಹ ಗಣಪನಿಂದ ರೋಗಗಳು ಹರಡುತ್ತದೆ.

ಮುಂದಿನ ವರ್ಷದಿಂದ ಸಾಧ್ಯವಾದಷ್ಟೂ ಪಿಓಪಿ ಗಣೇಶ ಮಾರಾಟ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಮಣ್ಣಿನ ಗಣಪನ ಪೂಜೆಗೆ ಹೆಚ್ವಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದ್ರು.

LEAVE A REPLY

Please enter your comment!
Please enter your name here