ಪರಿಸರ ಜಾಗೃತಿ ಕಾರ್ಯಕ್ರಮ…

0
275

ಚಿಕ್ಕಬಳ್ಳಾಪುರ/ಬಾಗೇಪಲ್ಲಿ: ಲಂಬಾಣಿ (ಗೋರ್ ಬಂಜಾರ) ಅಭಿವೃಧ್ಧಿ ಸಂಘ (ರಿ) ಬಾಗೇಪಲ್ಲಿ ಮತ್ತು ಮದ್ದೆಮ್ಮ ಪ್ರೌಢ ಶಾಲೆ ಚಾಕವೇಲು ಇವರ ಸಂಯುಕ್ತಾಶ್ರಯದಲ್ಲಿ ಇಂದು ಪರಿಸರ ಜಾಗೃತಿ ಮತ್ತು ಮುನ್ನೂರು ಗಿಡಗಳನ್ನು ನೆಡುವ ಹಾಗೂ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಯುವ ಪ್ರಶಸ್ತಿ ಪುರಸ್ಕೃತರು, ಜಾನಪದ ಗಾಯಕರು ಹಾಗೂ ಲಂಬಾಣಿ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗೋಪಿನಾಯಕ್ ರವರು ಜಾನಪದ ಮತ್ತು ಪರಿಸರ ಗೀತೆಗಳನ್ನು ಹಾಡಿ ಮಾತನಾಡಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಳುವಳಿಯಾಗಿ ಕೊಡುಗೆಯಾಗಿ ನೀಡಬೇಕು. ಪಂಚಭೂತಗಳನ್ನು ಮಾರಾಟಕ್ಕಿಟ್ಟಿದ್ದೇವೆ. ಮುಂದೆ ನಮ್ಮ ಬೆನ್ನಿಗೆ ಆಮ್ಲಜನಕದ ಸಿಲೀಂಡರ್ ಗಳನ್ನು ಹಾಕಿಕೊಂಡು ಉಸಿರಾಡುವ ಕಾಲ ಬರಬಾರದೆಂದು ತಿಳಿಸಿದರು. ಶಾಲೆಯ ಮುಖ್ಯಶಿಕ್ಷಕಿಯಾದ ಬಿ.ಎಂ.ಸವಿತಾ, ಸಹ ಶಿಕ್ಷಕರಾದ ಕೆ.ಪಿ.ಕೃಷ್ಣಮೂರ್ತಿ, ಟಿ.ವೈ.ನಾರಾಯಣಸ್ವಾಮಿ, ವೆಂಕಟಾಚಾರಿ, ವೆಂಕಟಶಿವ ರವರು ಹಾಜರಿದ್ದರು. ಹಾಗೆಯೇ ಶುಶ್ರೂಷಕಿಯರಾದ ಲಕ್ಷ್ಮೀದೇವಮ್ಮ , ಸಾವಿತ್ರಮ್ಮ ಮತ್ತು ಆಶಾಕಾರ್ಯಕರ್ತೆ ಜ್ಯೋತಿ ಹಾಜರಿದ್ದರು.

LEAVE A REPLY

Please enter your comment!
Please enter your name here