ಪರಿಸರ ಮಾಹಿತಿ ಕಾರ್ಯಕ್ರಮ.

0
299

ಚಿಕ್ಕಬಳ್ಳಾಪುರ/ಗುಡಿಬಂಡೆ: ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ನಮ್ಮನ್ನು ರಕ್ಷಿಸುವ ಪರಿಸರಕ್ಕೆ ನಾವು ಯಾವಾಗಲೂ ಋಣಿಯಾಗಿರಬೇಕು ಎಂದು ರಾಜ್ಯ ಪರಿಸರ ಮಿತ್ರ ಪುರಸ್ಕೃತ ಗುಂಪುಮರದ ಆನಂದ್ ಹೇಳಿದರು.

ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬುದು ಎಷ್ಟು ಸತ್ಯವೋ ಹಾಗೆಯೇ ನಾವು ಪರಿಸರವನ್ನು ರಕ್ಷಿಸಿದರೆ ನಮ್ಮನ್ನು ಪರಿಸರ ರಕ್ಷಿಸುತ್ತದೆ. ಗಿಡ ಮರಗಳ ರಕ್ಷಣೆಯ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಕೊಡಬೇಕು. ಮರಗಳ ರಕ್ಷಣೆಯಿಂದಲೇ ಮಳೆ ಎಂಬುವುದನ್ನು ತಿಳಿಸಿದರು.
ಬೆಮೆಲ್ ಸಂಸ್ಥೆಯ ನಿವೃತ್ತ ಇಂಜಿನಿಯರ್ ಕೃಷ್ಣಮೂರ್ತಿ ಮಾತನಾಡಿ, ಪರಿಸರದಲ್ಲಿ ಇಂದು ಅಸಮತೋಲನ ಉಂಟಾಗಿದ್ದು, ಸಕಲ ಜೀವರಾಶಿಗೂ ತೊಂದರೆ ಎದುರಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಜನರ ಪಾತ್ರ ಮಹತ್ವದ್ದಾಗಿದೆ. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಮಾಡುತ್ತಿರುವುದೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಮುಂದಿನ ಪೀಳಿಗೆ ಉತ್ತಮ ಜೀವನವನ್ನು ನಡೆಸ ಬೇಕಾದರೆ ಪರಿಸರ ರಕ್ಷಣೆ ಜವಾಬ್ದಾರಿ ಯನ್ನು ಪತ್ರಿತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಬಗ್ಗೆ ಪ್ರಬಂಧ ಸ್ಪರ್ದೆ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನಗಳನ್ನು ಹಾಗೂ ಇತರೆ ಶಾಲಾ ಮಕ್ಕಳಿಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಿದರು.
ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಮೇಲ್ವಿಚಾರಕ ಎಸ್.ಪ್ರದೀಪ್, ಲೆಕ್ಕ ಪರಿಶೋದಕಿ ಪುಷ್ಪಲತ, ಸೇವಾ ಪ್ರತಿನಿಧಿ ಸುಜಾತ, ಆದರ್ಶ ಶಾಲೆಯ ಶಿಕ್ಷಕ ರಾಜಶೇಖರ್, ನ್ಯೂ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಲ್. ಪರಿಮಳ, ಸಹ ಶಿಕ್ಷಕರಾದ ಎಲ್.ಎಂ.ರಾಜಾರೆಡ್ಡಿ, ಕೆ.ನೇತ್ರಾವತಿ, ಎನ್.ನರೇಶ್, ಎನ್.ನರಸಿಂಹಮೂರ್ತಿ, ಎಸ್.ಸುಪ್ರಿಯ, ಆಯಿಶಾ, ಭಾಗ್ಯಲಕ್ಷ್ಮಿ, ಕಲೀಲ್‌ವುಲ್ಲಾ, ಪೂರ್ಣಿಮ, ಗಂಗರಾಜು, ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here