ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

0
238

 

ಚಿಕ್ಕಬಳ್ಳಾಪುರ/ಗುಡಿಬಂಡೆ: ಪರಿಸರ ಸಂರಕ್ಷಣೆ
ಮಾಡುವುದು ಪ್ರತಿಯೊಬ್ಬ ನಾಗರಿಕನ
ಕರ್ತವ್ಯವಾಗಿದ್ದು,ಮುಂದಿನ ಪೀಳಿಗೆಗೆ ಪ್ರಕೃತಿ  ಸಂಪತ್ತನ್ನು  ಉಳಿಸಿ ಬೆಳೆಸುವ ಕೆಲಸ ನಮ್ಮಿಂದಾಗ
ಬೇಕಿದೆ ಎಂದುಪ.ಪಂ. ಸದಸ್ಯ ದ್ವಾರಕೀನಾಥ
ನಾಯ್ಡು ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಆವರಣದ ಮುಂದೆ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ  ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ
ಅವರು ಪರಿಸರನಾಶವಾದರೆ ಮನುಕುಲದ
ನಾಶವಾದಂತೆ. ಆ ಕಾರಣದಿಂದ ಪರಿಸರ ರಕ್ಷಣೆ ಎಲ್ಲರಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರ ಮನೆಗಳಿಂದಲೇ ಈ ಕೆಲಸ ಆರಂಭವಾಗಬೇಕಿದೆ.ಜನಸಾಮಾನ್ಯರಲ್ಲಿ ನೆಲ-ಜಲ ಸಂರಕ್ಷಣೆ, ಜೀವ-ವೈವಿಧ್ಯ ಹಾಗೂ
ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿಮೂಡಿಸುವ
ಮೂಲಕ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಆಗ ಮಾತ್ರನಮ್ಮ ಮುಂದಿನ ಪೀಳಿಗೆಯನ್ನು ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮುಂದಾಗ ಬೇಕೆಂದರು.
ನಂತರ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃ
ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಜತೆಗೆ, ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ. ಪರಿಸರದಲ್ಲಿ ಸಮತೋಲನ ಕಾಪಾಡಲು ಕಾಡನ್ನು ರಕ್ಷಿಸಬೇಕು. ಅರಣ್ಯದವೈವಿಧ್ಯತೆ ಉಳಿಸಲು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದುಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯೆ ಎಂ.ಎನ್.ರಾಜಣ್ಣ, ಅರಣ್ಯ ಇಲಾಖೆಯ ಹುಲಿಗಪ್ಪ, ವಕೀಲ ಜಿ.ಎಂ.ಅನೀಲ್ ಕುಮಾರ್, ಡಿ.ಸಿ.ಸಿ ಕ್  ನಿರ್ದೇಶಕ ನರಸಿಂಹರೆಡ್ಡಿ,ಎಸ್.ಬಿ.ಎಸ್. ಗ್ರೀನ್ ವಾರಿಯರ್ಸ್ನ ಆರ್.ಬಾಲಾಜಿ, ನಂದೀಶ್.ನವೀನ್,
ಕನ್ನಡ ಸೇನೆಯ ಅಂಬರೀಶ್ ಸೇರಿದಂತೆ
ಹಲವರು ಇದ್ದರು.

LEAVE A REPLY

Please enter your comment!
Please enter your name here