ಪರಿಹಾರ ಬಾರದ ಹಿನ್ನಲೆ ಮನನೊಂದು ಆತ್ಮಹತ್ಯೆ..

0
205

ಕೊಪ್ಪಳ : ಹೆದ್ದಾರಿಗಾಗಿ ಜಮೀನು ಕಳೆದುಕೊಂಡ ರೈತ.ಪರಿಹಾರ ಬಾರದದ ಹಿನ್ನಲೆ ಮನನೊಂದು ನೇಣಿಗೆ ಶರಣು.ಯಲಬುರ್ಗಾ ತಾಲೂಕಿನ ಉಪ್ಪಲದಿನಿ ಗ್ರಾಮದಲ್ಲಿ ಘಟನೆ.

ಸಿದ್ದಪ್ಪ ಹಣಮಪ್ಪ ಕರಡಿ(೨೫) ನೇಣಿಗೆ ಶರಣಾದ ಯುವಕ.ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗೆ ಜಮೀನು ಒತ್ತುವರಿಯಾಗಿ ಪರಿಹಾರ ಬಾರದ ಹಿನ್ನಲೆ ಮನನೊಂದು ನೇಣಿಗೆ ಶರಣು.ಬೇವೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು.

ಮೃತ ಸಿದ್ದಪ್ಪ ತಂದೆ ಹನುಮಂತಪ್ಪ ಇತನ ಹೊಲ ಸರ್ವೆ ನಂ 74 ನೇದ್ದು ಇದ್ದು ಸದರಿ ಹೊಲದ ವಿಸ್ತೀರ್ಣ ೧.ಎಕರೆ ೮ ಗುಂಟೆ‌ ಇದ್ದು ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಭೂ ಸ್ವಾಧೀನ ಮಾಡಿಕೊಂಡಿದ್ದು ಇದರಿಂದ‌ ಪರಿಹಾರ ಕೂಡಾ ಬಂದಿದ್ದು ಅದು ಕಡಿಮೆ ಪರಿಹಾರ ಕೊಟ್ಟಿರುತ್ತಾರೆ. ಸದರಿಯವನಿಗೆ ೧೩ ಗುಂಟೆ ಜಮೀನ‌ ಮಾತ್ರ ಉಳಿದಿತುತ್ತದೆ ಹೀಗಾಗಿ ಮೃತ ಸಿದ್ದಪ್ಪ ಇತನು ಸಂಸಾರ ನಿರ್ವಹಣೆಗಾಗಿ ಪ್ರಗತಿ ಕೃಷ್ಣ ಬ್ಯಾಂಕ್ ಹಿರೇವಂಕಲಕುಂಟ ಇಲ್ಲಿ ಬೆಳೆ ಸಾಲ 15720 ರೂಪಾಯಿ ಸಾಲ ಮಾಡಿಕೊಂಡಿದ್ದು ಸದರಿ ಮೃತನು ಭೂ ಸ್ವಾಧೀನದಿಂದ ಸರಿಯಾಗಿ ಪತಿಹಾರ ಸಿಕ್ಕಿಲ್ಲ ಅಂತಾ ಮನಸ್ಸಿಗೆ ಬೇಜಾರ ಮಾಡಿಕೊಂಡು ತನ್ನ ಹೊಲದ‌ ಹುಣಸೆ‌ ಮರದ ಟೊಂಗೆಗೆ‌ ಹಗ್ಗದಿಂದ ಉರುವಲ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

LEAVE A REPLY

Please enter your comment!
Please enter your name here