ಪರ್ವತ ಪರ್ಷೆ ಉತ್ಸವ ಕಾರ್ಯಕ್ರಮ..

0
141

ಮಂಡ್ಯ/ಮಳವಳ್ಳಿ:ಮಳೆಯ ತಾಲ್ಲೂಕಿನ ಹೊರವಲಯದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧ ವಾದ ಮುಡುಕುತೊರೆಯಲ್ಲಿ ಪರ್ವತ ಪರ್ಷೆ ಉತ್ಸವ ಕಾರ್ಯಕ್ರಮದ ಅಂಗವಾಗಿ ಮಲ್ಲಿಕಾರ್ಜುನ ಹಾಗೂ ಭ್ರಮರಾಂಭ ದೇವರ ದರ್ಶನ ವನ್ನು ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬೆಳಿಗ್ಗೆ 7 ಗಂಟೆಯಿಂದಲೇ ರಾಜ್ಯದ ಮೂಲೆಮೂಲೆಗಳಿಂದಲೂ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರದರ್ಶನ ಪಡೆದರು. ಇದರ ಮದ್ಯೆ ಕೆಲಭಕ್ತರು ಕೋಸಬರಿ, ಪಾನಕವನ್ನು ದೇವರದರ್ಶನಮಾಡಲು ಬಂದ ಭಕ್ತರಿಗೆ ಹಂಚುವ ದೃಶ್ಯ ಕಂಡುಬಂತು, ಮದುವೆಯಾದ ಹೆಂಗಸರು ತಮ್ಮ ಮುತೈದೆತನ ವೃದ್ದಿಯಾಗುತ್ತದೆ ಎಂದು ದರ್ಶನ ಮಾಡಿ ಪೂಜೆ ಸಲ್ಲಿಸುತ್ತಾರೆ. ಎಂದು ಅರ್ಚಕರು ತಿಳಿಸಿದರು. ಬೈಟ್ ೧ ಮಲ್ಲಣ್ಣ ಅರ್ಚಕರು

LEAVE A REPLY

Please enter your comment!
Please enter your name here