ಪಾದಯಾತ್ರೆ ಮೂಲಕ ಹಂಪಿಗೆ..

0
186

ಬಳ್ಳಾರಿ /ಹೊಸಪೇಟೆ : ಶ್ರಾವಣ ಏಕಾದಶಿ ನಿಮಿತ್ತ ಮಂಗಳವಾರ ಹಂಪಿಗೆ ಜಿಲ್ಲೆಯ ವಿವಿದ ಸ್ಥಳಗಳಿಂದ ನೂರಾರು ಪಾಂಡುರಂಗ ಭಕ್ತರು ಆಗಮಿಸಿದ್ದಾರೆ. ಹಗರಿಬೊಮ್ಮನ ಹಳ್ಳಿ ತಾಲೂಕಿನ ಮರೆಬ್ಬಿಹಾಳ ಗ್ರಾಮದ 50ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ಮುಖಾಂತರ ಹಂಪಿಗೆ ಆಗಮಿಸಿದ್ದಾರೆ. ರಸ್ತೆಯುದ್ದಕ್ಕು ಭಕ್ತಿ ಹಾಡುಗಳನ್ನು ಹಾಡುತ್ತ ಭಜನೆಗೆ ಹೆಜ್ಜೆ ಹಾಕಿ ಕುಣಿಯುತ್ತಾ ಸಾರ್ವಜನಿಕರನ್ನು ಆಕರ್ಷಿಸಿದ್ದಾರೆ. ಹಲವು ಮಹಿಳೆಯರು ಕುಂಭಗಳನ್ನು ಹೊತ್ತರೆ ಹಲವರು ಪಾಂಡುರಂಗನ ಪಾದುಕೆಯನ್ನು ಹೊತ್ತು ಹೆಜ್ಜೆ ಹಾಕುತ್ತಿದ್ದಾರೆ. ಮಂಗಳವಾರದ ಏಕದಶಿಯಂದು ಹಂಪಿಯಲ್ಲಿ ತಂಗಿ ತುಂಗಭದ್ರ ನದಿಯ ಸ್ನಾನ ಮಾಡುವುದಾಗಿ ಭಕ್ತರು ತಿಳಿಸಿದ್ದಾರೆ. ಹಂಪಿಗೆ ಆಗಮಿಸಿರುವ ಪಾಂಡುರಂಗ ಭಕ್ತರಿಗೆ ಸ್ಥಳೀಯ ನಿವಾಸಿಗಳಾದ ವಿ.ಗೋಪಾಲ್, ಹುಲುಗಪ್ಪ, ಬಸುವರಾಜ, ಶಿವುಕುಮಾರ, ಶರಣ ಹಾಗೂ ಇತರರು ಸೇರಿ ಏಕಾದಶಿ ಆಚರಿಸಲು ವಿವಿಧ ಖ್ಯಾಧ್ಯಗಳನ್ನು ವಿತರಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here