ಪಾಸ್ಟರ್ ಆಪ್ ಪ್ಯಾರೀಸ್ ಗಣೇಶ ಮೂರ್ತಿ ಜಪ್ತಿ ,ಮಾರಾಟಗಾರರಿಗೆ ಲಾಠಿ ಪ್ರಹಾರ!

0
337

ಬಳ್ಳಾರಿ /ಬಳ್ಳಾರಿ :ಪಾಸ್ಟರ್ ಆಪ್ ಪ್ಯಾರೀಸ್ ಗಣೇಶ ಮೂರ್ತಿ ಜಪ್ತಿ ಮಾಡಿದ ಮಹಾನಗರ ಪಾಲಿಕೆ !
ಗಣೇಶ ಚತುರ್ಥಿಗೆ ಇನ್ನೆರಡು ದಿನಗಳು ಮಾತ್ರ ಬಾಕಿಯುಳಿದಿದೆ, ಹೀಗಾಗಿ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ಮಾರಾಟ ಭರದಿಂದ ಸಾಗಿದೆ. ಆದ್ರೆ ಬಳ್ಳಾರಿ ಮಹಾನಗರ ಪಾಲಿಕೆ ಪಾಸ್ಟರ್ ಆಪ್ ಪ್ಯಾರೀಸ್ ಗಣೇಶ ಮೂರ್ತಿಗಳ ವಿರುದ್ದ ಸಮರ ಸಾರಿದೆ. ಪರಿಸರಕ್ಕೆ ಹಾನಿಯುಂಟುಮಾಡುವ ಪಿಓಪಿ ಗಣೇಶ ಮೂರ್ತಿಗಳನ್ನು ಕಳೆದರೆಡು ದಿನಗಳಿಂದ ಜಪ್ತಿ ಮಾಡಲಾಗುತ್ತಿದೆ, ಬಳ್ಳಾರಿಯ ದುರ್ಗಮ್ಮ ದೇವಾಲಯದ ಆವರಣದಲ್ಲಿಂದು ಪಿಓಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದ ಮೂರ್ತಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ರೂ. ಈ ವೇಳೆ ಗಣೇಶ ಮೂರ್ತಿ ಜಪ್ತಿ ಮಾಡಲು ಮುಂದಾದ ಪಾಲಿಕೆ ಆಯುಕ್ತರು ಹಾಗೂ ಪೊಲೀಸರೊಂದಿಗೆ ಮೂರ್ತಿ ಮಾರಾಟಗಾರರು ವಾಗ್ದಾದಕ್ಕೆ ಇಳಿದರು. ಈ ವೇಳೆ ಪಿಓಪಿ ಗಣೇಶ ಮೂರ್ತಿಗಳ ಜಪ್ತಿಗೆ ಅಡ್ಡಿಪಡಿಸಿದ ಮಾರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಪಿಓಪಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿದ್ರೂ, ನಿನ್ನೆಯಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಪಾಲಿಕೆಯ ಅಧಿಕಾರಿಗಳು ಇದೂವರೆಗೂ ೫೦ಕ್ಕೂ ಹೆಚ್ಚು ಬೃಹತ್ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿದ್ದಾರೆ,

LEAVE A REPLY

Please enter your comment!
Please enter your name here