ಪಿಂಚಣಿಗಾಗಿ ಪ್ರತಿಭಟನೆ….

0
112
ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ವೃದ್ಯಾಪ್ಯ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಸರ್ಕಾರ ನೀಡುತ್ತಿರುವ ಪಿಂಚಣಿಗಳು ಸೂಕ್ತ ಸಮಯಕ್ಕೆ ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಫಲವಾಗುತ್ತಿವೆ ಎಂದು ದೂರಿ, ಪಿಂಚಣಿ ವಿತರಿಸುವ ಅಂಚೆಕಚೇರಿ ಸಿಬ್ಬಂದಿಯ ವಿರುದ್ದ  ಕಚೇರಿಯ ಮುಂದೆ ಕರೇನಹಳ್ಳಿ ನಾಗರೀಕ ಹಿತರಕ್ಷಣಾ ವೇದಿಕೆಯ ಕೆರಮಲ ಬದ್ರಿ ನೇತೃತವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಭಾಗವಹಿದಿದ್ದ ನೊಂದ ವೃದ್ದರು ಅನೇಕರು ಆರು ತಿಂಗಳಾದರೂ ಪಿಂಚಣಿ ಹಣ ನೀಡುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ಕರೇನಹಳ್ಳಿ ನಾಗರೀಕರ ಹಿತರಕ್ಷಣಾ ವೇದಿಕೆಯ ಕೆರಮಲ ಬದ್ರಿ ಮಾತನಾಡುತ್ತಾ ವಿನಾಕಾರಣ ವಯೋವೃದ್ಧರನ್ನು ಪಿಂಚಣೀ ನೀಡದೆ ಸತಾಯಿಸುತ್ತಿದ್ದಾರೆ. ವಯಸ್ಸಾದ ಹಿರಿಯ ನಾಗರೀಕರು ಸರ್ಕಾರ ನೀಡುವ ಪಿಂಚಣಿ ಅವಲಂಭಿತ ಜೀವನ ನಡೆಸುತ್ತಿರುವ ಇಂತಹ  ಅನೇಕರಿಗೆ ವಂಚನೆ ಮಾಡುತ್ತಿರುವ  ವಂಚಕ ಅಧಿಕಾರಿಗಳನ್ನು ದಂಡಿಸುವಂತಹವರೇ ಇಲ್ಲಂದಂತಾಗಿದೆ ಎಂದು ಆರೋಪಿಸಿದರು. ಅದರಲ್ಲೂ ಅನೇಕರು ಅನಾರೋಗ್ಯ ಪೀಡಿತರಾಗಿದ್ದು ನಡೆದಾಡುವ ಪರಿಸ್ಥಿತಿಯೂ ಇಲ್ಲ ಇಂತಹವರನ್ನು ಅಲೆದಾಡಿ ಸುವುದನ್ನು ರೂಡಿದಸಿಕೊಂಡಿರುವ ಇವರು ಮಾನವೀಯತೆಯನ್ನು ಮರೆಯುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಾಕಷ್ಟು ಜನರಿಗೆ ಕಳೆದ ನವೆಂಬರ್ ತಿಂಗಳಿನಿಂದಲೂ ಪಿಂಚಣಿ ಹಣ ನೀಡದೇ ಸತಾಯಿಸುತ್ತಿರುವ ಅಧಿಕಾರಿಗಳನ್ನು ಪ್ರಶ್ನೆಮಾಡಲಾಗಿ ತಾಂತ್ರಿಕ ದೋಶ ದಿಂದ ವಿಳಂಭವಾಗಿದೆ ಹೊರಿತು ಯಾವುದೇ ಉದ್ದೇಶವಿಲ್ಲ ಎಂಬ ಸಬೂಬು ಹೇಳಿ ನುಳಿಚಿಕೊಳ್ಳುವ ಪ್ರಯತ್ನ ಮಾಡಿದ ಅಧಿಕಾರಿಯನ್ನು ಈ ಕೂಡಲೇ ಪೆಂಡಿಂಗ್ ಪಿಂಚಣಿ ಹಣವನ್ನು ನೀಡಬೇಕೆಂದು ಪಟ್ಟು ಹಿಡಿದರು.
ಪೋಲಿಸರ ಮದ್ಯ ಪ್ರವೇಶಿಸಿದಿಂದ ಮೂರು ದಿನಗಳ ಕಾಲಾವಕಾಶ ಪಡೆದ ಪೋಸ್ಟ್ ಮಾಸ್ಟರ್ ರಮೇಶ್ ಬಾಬು  ಪಿಂಚಣಿ ಹಣ ಫಲಾನುಭವಿಗಳಿಗೆ ಪಾವತಿಸುವುದಾಗಿ ಬರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here