ಪಿಡಿಒ ಅಮಾನತ್ತಿಗೆ ಒತ್ತಾಯಿಸಿ ಬಿಎಸ್ಪಿಯಿಂದ ಧರಣಿ

0
280

ಬೀದರ್/ಬಸವಕಲ್ಯಾಣ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆಸಿದ ತಾಲೂಕಿನ ಮುಚಳಂಬ ಗ್ರಾಪಂ ಪಿಡಿಒ ಅವರನ್ನು ಅಮಾನತ್ತು ಗೊಳಿಸಬೇಕು ಎಂದು ಒತ್ತಾಯಿಸಿ ಬಿಎಸ್ಪಿ ತಾಲೂಕು ಘಟಕದಿಂದ ತಹಸಿಲ್ ಕಚೇರಿ ಎದುರು ಧರಣಿ ನಡೆಸಲಾಯಿತು. ಮುಚಳಂಬ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2014ರಿಂದ 2016 ವರೆಗಿನ ಸಾಲಿನಲ್ಲಿ ನಡೆದ ಕಾಮಗಾರಿಗಳು ಕಳಪೆಮಟ್ಟದ್ದಾಗಿದ್ದರು ಸಹ ಕಾಮಗಾರಿಗೆ ಬಿಲ್ಲು ನೀಡಿದ್ದಾರೆ. ಈ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನೆ ಆಗಿಲ್ಲ ಎಂದು ಧರಣಿ ನಿರತರರು ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿಯಲ್ಲಿ ಅಕ್ರಮ, ಅವ್ಯವಹಾರ ನಡೆಸಿದ ಪಿಡಿಒ ಸೇರಿದಂತೆ ಸಂಬಂಧಿಸಿದವರ ಮೇಲೆ ಪ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ. ಬೇಡಿಕೆ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಗ್ರೇಡ್-2 ತಹಸೀಲ್ದಾರ ಸಂಗಯ್ಯ ಸ್ವಾಮಿ, ಉಪ ತಹಸೀಲ್ದಾರ ಶಿವಾನಂದ ಮೇತ್ರೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಬಿಎಸ್ಪಿ ತಾಲೂಕು ಅಧ್ಯಕ್ಷ ಅಶೋಕ ಮಂಠಾಳಕರ್, ಉಪಾಧ್ಯಕ್ಷ ಮಾರುತಿ ಕಾಂಬಳೆ, ಪ್ರಧಾನ ಕಾರ್ಯದಶರ್ಿ ಜ್ಞಾನೇಶ್ವರ ಸಿಂಗಾರೆ, ಪದಾಧಿಕಾರಿಗಳಾದ ಕಾಶಿನಾಥ ಭೆಂಡೆ, ಜಮೀಲ ಖಾನ ಹುಮನಾಬಾದ, ಆರೀಫೋದ್ದಿನ್, ಇಸ್ಮಾಯಿಲ್ ಸಾಬ್, ಎಂ.ಡಿ.ಜಿಲಾನಿಮಿಯಾ, ಜ್ಞಾನದೇವ ಖಲ್ಲಾಳೆ, ಶೇರ ಅಲಿ, ಮಕಬುಲ್ ಸಾಬ್, ನರಸಿಂಗ್ ಮಾನೆ, ವಿನೋದ ವಿನಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here