ಪಿಡಿಒ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ…

0
205

ಮಂಡ್ಯ/ಮಳವಳ್ಳಿ: ಜಿ.ಪಂ ಮಾಜಿ ಉಪಾಧ್ಯಕ್ಷ ಶಿವಲಿಂಗಯ್ಯರವರು ಪಿಡಿಒ ಮೇಲೆ ದೌರ್ಜನ್ಯ ಮಾಡುತ್ತಿರುವುದನ್ನು ಖಂಡಿಸಿ ಲಿಂಗಣಾಪುರ ಗ್ರಾಮಸ್ಥರು ಹಾಡ್ಲಿ ಗ್ರಾಮಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.

ಸಾರ್ವಜನಿಕ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ಅಧಿಕಾರ ಸಮ್ಮುಖದಲ್ಲಿ ಮಂಜೂರು ನಡೆಸಿ ನಂತರ ತೊಂಬೆಯನ್ನು ಕಿತ್ತುಹಾಕಿದ್ದು , ಇದಲ್ಲದೆ ಎರಡು ವರ್ಷಗಳ ಹಿಂದೆ ನಡೆದ ಪ್ರಕರಣವನ್ನು ರಾಜಕೀಯ ಉದ್ದೇಶದಿಂದ ಪ್ರತಿಭಟನೆ ನಡೆಸಿದ್ದು, ಜೊತೆಗೆ ಪಿಡಿಒ ಶ್ರೀನಿವಾಸರವರ ಮೇಲೆ ದೌರ್ಜನ್ಯ ಮತ್ತು ಬೆದರಿಕೆ ಹಾಕುತ್ತಿದ್ದಾರೆಎಂದು ಮಾಜಿ ಮುನ್ ಮುಲ್ ಮಾಜಿ ನಿರ್ದೇಶಕ ಲಿಂಗರಾಜು ಆರೋಪಿಸಿದರು. ಪ್ರತಿಭಟನೆಯಲ್ಲಿ ಸಾಗ್ಯ ಕೆಂಪಯ್ಯ, ಮಾಜಿ ಗ್ರಾ.ಪಂ ಅಧ್ಯಕ್ಷ ಶಿವಮಾದೇಗೌಡ, ಪಂಚಲಿಂಗಪ್ಪ, ರಾಜು, ಯುವಕಾಂಗ್ರೇಸ್ ಕಾರ್ಯದರ್ಶಿ ಮಹದೇವಪ್ರಸಾದ್. ತಾ.ಪಂ ಮಾಜಿ ಅಧ್ಯಕ್ಷ ಮಹದೇವ, ದೇಪೇಗೌಡ, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here