ಪಿಡಿಓ ಮೇಲೆ ಹಲ್ಲೆ..?!

0
141

ಚಿಕ್ಕಬಳ್ಳಾಪುರ:ಗುಡಿಬಂಡೆ: ತಾಲ್ಲೂಕಿನ ತಿರುಮಣಿ ಗ್ರಾಮಪಂಚಾಯತಿಗೆ ಸೇರಿದ ಜಾಗದಲ್ಲಿಅನಧಿಕೃತವಾಗಿ ಮನೆ ಕಟ್ಟುವ ಕೆಲಸ ಶುರುಮಾಡಿದ್ದ ವ್ಯಕ್ತಿಯನ್ನು ಪ್ರಶ್ನಿಸಿದಾಗಗ್ರಾ.ಪಂ ಅಧಿಕಾರಿ ಸುಭಾನ್‌ಸಾಬ್ ಮತ್ತು ಅಧ್ಯಕ್ಷ ರಾಮಾಂಜಿ ಮೇಲೆ ಹಲ್ಲೆಘಟನೆ ಜೆ.ಪಿ ನಗರದಲ್ಲಿ ನಡೆದಿದೆ.

ತಿರುಮಣಿ ಗ್ರಾ.ಪಂ ವ್ಯಾಪ್ತಿಯ ಜೆ.ಪಿ ನಗರ ಗ್ರಾಮದ ವಾಸಿಯಾದಗೋಪಾಲಪ್ಪ ಎಂಬುವರು ಗ್ರಾ.ಪಂ ಸೇರಿದ ಜಾಗದಲ್ಲಿ ಅನಧಿಕೃತವಾಗಿ ಮನೆಕಟ್ಟಲು ಪಾಯ ಹಾಕುತ್ತಿದ್ದರು. ಈ ಸಂಬಂದ ಪಂಚಾಯಿತಿ ಅಧಿಕಾರಿ ಸುಭಾನ್ಮತ್ತು ಅಧ್ಯಕ್ಷರಾದ ರಾಮಾಂಜಿ, ಈ ಜಾಗ ಪಂಚಾಯಿತಿಗೆ ಸೇರಿದ್ದು, ಯಾಕೆಪಾಯ ಹಾಕುತ್ತಿದ್ದೀಯ ಎಂದು ಕೇಳಿದ್ದಕ್ಕೆ ಗೋಪಾಲಪ್ಪ ಏಕಾ ಎಕಿಅಧಿಕಾರಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಕಲ್ಲು ಮತ್ತುಮುಳ್ಳಿನ ತಂತಿಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಪಿಡಿಓ ಕೈಗಳು, ಕತ್ತುಸೇರಿದಂತೆ ದೇಹದ ಇತರೆ ಭಾಗಗಳಿಗೆ ಪೆಟ್ಟಾಗಿದ್ದು, ಪಟ್ಟಣದ ಸಾರ್ವಜನಿಕಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಕುರಿತು ಗುಡಿಬಂಡೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳುಪ್ರಕರಣದ ಬಗ್ಗೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಆರಕ್ಷಕರ ವೃತ್ತನಿರೀಕ್ಷಕ ಜೆ.ಗೌತಮ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here