ಪುರಸಭೆ ನಿರ್ಲಕ್ಷ್ಯ ಖಂಡಿಸಿ ಜೆಡಿಎಸ್ ಕಾಯ೯ಕತ೯ರಿಂದ ಪ್ರತಿಭಟನ

0
177

ಮಂಡ್ಯ/ಮಳವಳ್ಳಿ: ಮಾರೇಹಳ್ಳಿ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನ ದ ಬಳಿ ಒಂಬತ್ತು ವಷ೯ಗಳ ಹಿಂದೆ ಹಂಚಿದ್ದ ಹಕ್ಕುಪತ್ರಗಳನ್ನು ಸ್ವಾಧೀನಗೊಳಸದೆ ವಿಳಂಭ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ಪಕ್ಷ ಕಾಯ೯ಕತ೯ರು ಹಾಗೂ ಹಕ್ಕುಪತ್ರಹೊಂದಿದ ನೂರಾರು ಫಲಾನುಭವಿದಾರರ ಮಳವಳ್ಳಿಪಟ್ಟಣದ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಡಾ.ಕೆ ಅನ್ನದಾನಿ ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮತ್ತು ಜಿ.ಪಂ ಸದಸ್ಯ ರವಿ ರವರ ನೇತೃತ್ವದಲ್ಲಿ ಹಕ್ಕುಪತ್ರಗಳನ್ನು ಪ್ರದಶ೯ನ ಮಾಡಿ ರಾಜ್ಯ ಸಕಾ೯ರ ಹಾಗೂ ಪುರಸಭೆ ಆಡಳಿತ ವಿರುದ್ದ ಘೋಘಣೆ ಕೂಗಿದರು. ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ ಇನ್ನೂ ಒಂದು ವಾರದೊಳಗೆ ಹಕ್ಕು ಪತ್ರವನ್ನು ಫಲಾನುಭವಿಗಳಿಗೆ ಸ್ವಾಧೀನ ಪಡಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು . ಇದಲ್ಲದೆ ಪುರಸಭೆಗೆ ಸೇರಿದ ಆಸ್ತಿ ಯನ್ನು ಆಶ್ರಯ ಸಮಿತಿಗೆ ಸೇರಿದಿದ್ದು ಇದು ಕಾನೂನುಭಾಹಿರ ಈ ರೀತಿ ಅಂದಿನ ಮುಖ್ಯಾಧಿಕಾರಿಯಾಗಿದ್ದ ಪುಟ್ಟಸ್ವಾಮಿರವರ ಮೇಲೆ ಕ್ರಿಮಿನಲ್ ಮೊಕ್ಕದಮೆ ಹೂಡಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ನಗರಾಭಿವೃದ್ಧಿ ಇಲಾಖೆ ಯೋಜನಾ ನಿದೇ೯ಶಕ ಬಾಲಚಂದ್ರ .ತಹಸೀಲ್ದಾರ್ ದಿನೇಶ್.ಚಂದ್ರ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ ಜಿಲ್ಲಾಧಿಕಾರಿ ಮೂಲಕ ಸಕಾ೯ರಕ್ಕೆ ಸಲ್ಲಿಸುವಿದಾಗಿ ತಿಳಿಸಿದಾಗ ರೊಚ್ಚಿಗೆದ್ದ ಪ್ರತಿಭಟನಾಕಾರರು ಮಾತಿನ ವಾಗ್ದಾಳಿ ನಡೆಸಿದರು . ಮಾಜಿ ಶಾಸಕ ಅನ್ನದಾನಿ ಹಕ್ಜುಪತ್ರಕ್ಕೆ ಬೆಲೆವಿಲ್ಲವೇ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ರವಿ. ಪುರಸಭೆ ಸದಸ್ಯ ರಾಜಣ್ಣ.ಮಣಿನಾರಾಯಣ, ಚಿಕ್ಕರಾಜು, ರಮೇಶ.ನಂದಿನಿ, ಮೆಹಬೂಬ್ ಪಾಷ, ಸವಿತರಾಜು, ಮಹೇಶ್, ಮುಖಂಡ ವಡ್ಡರಹಳ್ಳಿವಿಶ್ವನಾಥ್, ಸಿದ್ದರಾಜು. ಕಂಬರಾಜು, ನಾರಾಯಣ, ಮಾಜಿಪುರಸಭಾಧ್ಯಕ್ಷ ದೊಡ್ಡಯ್ಯ, ಹುಸ್ಕೂರು ರಮೇಶ್. ಸೇರಿದಂತೆ ನೂರಾರು ಹಕ್ಕುಪತ್ರ ಪಡೆದ ಫಲಾನುಭವಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here