ಪೂರಿಗಾಲಿ ಏತ ನೀರಾವರಿ ಯೋಜನೆಗೆ ಚಾಲನೆ

0
127

ಮಂಡ್ಯ/ಮಳವಳ್ಳಿ: 593 ಕೋಟಿ ರೂ ವೆಚ್ಚ ದ ಪೂರಿಗಾಲಿ ಏತ ನೀರಾವರಿ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟನೆ ಮಾಡಿದ ಆರು ತಿಂಗಳ ನಂತರ ಅಧಿಕೃತವಾಗಿ ಪ್ರಾರಂಭಿಕವಾಗಿ ಚಾಲನೆಯನ್ನು ಶಾಸಕ ಪಿ.ಎಂ .ನರೇಂದ್ರಸ್ವಾಮಿ ರವರು ನೀಡಿದರು.
ಮಳವಳ್ಳಿ ತಾಲ್ಲೂಕಿನ ಸೋಮನಹಳ್ಳಿ ಬಳಿ ಯೋಜನೆಯ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ರವರು ಉದ್ಘಾಟಿಸಿದ ಕಾಮಗಾರಿಗೆ ತಾಂತ್ರಿಕ ಹಾಗೂ ಜಮೀನಿನ ಖರೀದಿಯಿಂದ ವಿಳಂಭವಾಯಿತು ಎಂದ ಅವರು ನಾನು ಸಾಧನೆ ಮಾಡಿ ಮಾತನಾಡುತ್ತೇನೆ ಬೇರೆಯವರ ಹಾಗೆಯೇ ಜಂಬ ಕೊಚ್ಚಿಕೊಳ್ಳುವುದಿಲ್ಲ. ಕ್ಷೇತ್ರದಲ್ಲಿ ನಮ್ಮ ಪಕ್ಷದಲ್ಲೇ ಇದ್ದುಕೊಂಡು ನಮಗೆ ತೊಂದರೆ ಕೊಡಲು ಹೊರಟಿದ್ದಾರೆ. ಎಂದು ಪರೋಕ್ಷವಾಗಿ ಕೆಪಿಪಿಸಿ ಪ್ರಧಾನಕಾರ್ಯದರ್ಶಿ ದಡದಪುರ ಶಿವಣ್ಣ ಹೆಸರನ್ನು ಹೇಳದೆ ಮುಖ್ಯಮಂತ್ರಿ ಹಾಗೂ ನನಗೂ ವೈಮನಸ್ಸು ಬರುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರು. ನಮ್ಮ ಸರ್ಕಾರ ಬಂದ ನಂತರ ಕ್ಷೇತ್ರ ಅಭಿವೃದ್ಧಿ ಕಂಡಿರುವುದು . ಅದೇ ವಿರೋದಿಗಳು ಅಪಪ್ರಚಾರ ಮಾಡುತ್ತಿದ್ದು, ನಮ್ಮ ಕಾರ್ಯಕರ್ತರು ಸಹ ಎಚ್ಚೆತ್ತುಗೊಂಡ ಅಭಿವೃದ್ಧಿ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಕಾರ್ಯಕ್ರಮ ದಲ್ಲಿ ಗ್ರಾ.ಪಂ ಅಧ್ಯಕ್ಷ ಸುಜಾತ , ತಾ.ಪಂ‌ ಅಧ್ಯಕ್ಷ ಆರ್.ಎನ್ ವಿಶ್ವಾಸ ಉಪಾಧ್ಯಕ್ಷ ಮಾಧು, ಎಪಿಎಂಸಿ ಅಧ್ಯಕ ಅಂಬರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟರಾಮು, ಜಿ.ಪಂ ಸದಸ್ಯೆ ಜಯಕಾಂತ , ಅಮೃತಕಂಠೇಶ್. ತಾ.ಪಂ ಸದಸ್ಯರಾದ ಗಿರಿಜಾಮಹೇಶ, ಪುಟ್ಟಸ್ವಾಮಿ, ಶರತ್, ಟಿಎಪಿಸಿಎಂಸಿ ಅಧ್ಯಕ್ಷ ಚೌಡೇಶ್. ಕಾವೇರಿ ನಿಗಮದ ಅಧಿಕಾರಿ ವಿಜಯಕುಮಾರ್. ಮಲ್ಲಿಕಾರ್ಜುನ, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here