ಪೂರ್ವಭಾವಿ ಸಭೆ.

0
174

ಮಂಡ್ಯ/ಮಳವಳ್ಳಿ:ಕೇಂದ್ರ ಸರ್ಕಾರ 155 ಯೋಜನೆಯನ್ನು ನೀಡಿದ್ದರೂ ರಾಜ್ಯಸರ್ಕಾರ ಜನರಿಗೆ ತಲುಪಿಸಲು ವಿಫಲವಾಗಿದೆ ಎಂದು ಮಾಜಿಸಚಿವ ರಾಮದಾಸ್ ವಿಷಾದ ವ್ಯಕ್ತಪಡಿಸಿದ್ದಾರೆ.

ಮಳವಳ್ಳಿ ಪಟ್ಟಣದ ಬಿಜೆಪಿ ಪಕ್ಷದ ಕಚೇರಿ ಆವರಣದಲ್ಲಿ ನಡೆದ ವಿಸ್ತಾರಕರ ಪೂರ್ವಭಾವಿ ಸಭೆ ಯನ್ನು ಉದ್ದೇಶಿಸಿ ಮಾತನಾಡಿ ಕೇಂದ್ರ ಸಕಾ೯ರ ದ ಯೋಜನೆಗಳ ಇದುವರೆಗೂ ಅನ್ನಭಾಗ್ಯ ಯೋಜನೆ ಮಾತ್ರ ರಾಜ್ಯದಲ್ಲಿ ಜಾರಿಗೆ ಬಂದಿದೆ ಕೇಂದ್ರ ಸಕಾ೯ರ 29 ರೂ ನೀಡಿದರೆ ರಾಜ್ಯ ಸಕಾ೯ರ 3 ರೂ ಸೇರಿಸಿ ನೀಡುತ್ತಿದೆ. ಎಂದರು. ರಾಜ್ಯಕ್ಕೆ ಕಾಂಗ್ರೆಸ್ ರೋಗವಾಗಿ ಬಂದಿದ್ದು ಅದನ್ನು ಹೋಗಿಸಲು ನಾವೆಲ್ಲರೂ ಪಣ ತೊಡಗಿ ಎಂದರು.

ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಪಕ್ಷ ದ ಶಾಸಕರನ್ನು ನೀಡಲು ಜನರು ಮುಂದೆ ಬರುವ ಆಶಾಭಾವನೆಯನ್ನು ತೋರಿದ್ದಾರೆ ಅದನ್ನು ಸದುಪಯೋಗಪಡಿಸಿಕೊಂಡು ಮತದಾರರನ್ನು ಮನವೋಲಿಸೋಣ ಎಂದರು. ತಾಲ್ಲೂಕಿನ ಗ್ರಾಮದಲ್ಲಿನ ಜನರಿಗೆ ಕೇಂದ್ರ ಯೋಜನೆಯನ್ನು ಮನವರಿಕೆ ಮಾಡಿಕೊಟ್ಟರೆ ರಾಜ್ಯದಲ್ಲಿ ಬಿಜೆಪಿ ಅದಿಕಾರಕ್ಕೆ ಬರುವುದು ನಿಶ್ಚಿತ ಎಂದರು ಕಾಯ೯ಕ್ರಮ ದಲ್ಲಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯ ಯಮದೂರುಸಿದ್ದರಾಜು, ತಾಲ್ಲೂಕುಅಧ್ಯಕ್ಷ ಶಿವಸ್ವಾಮಿ, ವಿಸ್ತಾರಕರಾದ ಸುರೇಶ್ ಬಾಬು, ದೇವರಾಜು.ಕುಮಾರಸ್ವಾಮಿ, ಹಿಂದುಳಿದವರ್ಗದ ಜಿಲ್ಲಾಧ್ಯಕ್ಷ ಡಾ.ಶ್ರೀಧರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಎಂ.ಎನ್ ಕೃಷ್ಣ‌ , ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here