ಪೈಪ್ಲೈನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು

0
227

ಬೆಂಗಳೂರು/ಕೃಷ್ಣರಾಜಪುರ: 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡುವ ಸರ್ಕಾರದ ಮಹತ್ವದ ಯೋಜನೆಯಡಿಯಲ್ಲಿ ಕೃಷ್ಣರಾಜಪುರ ವಿಧಾನ ಸಭಾ ಕ್ಷೇತ್ರದ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಪೈಪ್ಲೈನ್ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ್ ಚಾಲನೆ ನೀಡಿದರು. ಇಲ್ಲಿನ ರಾಮಮೂತರ್ಿ ನಗರದ ಕಲ್ಕೆರೆ ಗ್ರಾಮದಲ್ಲಿ ಕಾವೇರಿ ಪೈಪ್ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡಿಸಿಕೊಳ್ಳಲಾಗಿದ್ದ 110 ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ಸಕರ್ಾರ 110 ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗುವ ಮೂಲಕ ಅಭಿವೃದ್ಧಿಯ ಬದ್ಧತೆ ತೋರಿದೆ. ಕಾವೇರಿ ಸರಬರಾಜು ಯೋಜನೆಯ 5ನೇ ಹಂತದ ಕಾಮಗಾರಿಯಲ್ಲಿ ಮಹದೇವಪುರ ವಲಯದ ಕೆಆರ್ ಪುರ ಕ್ಷೇತ್ರದಲ್ಲಿನ ಕೆ.ಚನ್ನಸಂದ್ರ, ಕಲ್ಕೆರೆ, ಅಮಾನಿ ಬೈರತಿ ಖಾನೆ, ಚೆಳಕೇರೆ, ಹೊರಮಾವು ಅಗರ, ಗೆದ್ದಲಹಳ್ಳಿ, ಕೊತನೂರು ನಾರಾಯಣಪುರು, ಕೊತ್ತನೂರು, ಕ್ಯಾಲಸನಹಳ್ಳಿ, ಹೊರಮಾವು, ನಗರೇಶ್ವರ ನಾಗೇನಹಳ್ಳಿ ಹಳ್ಳಿಗಳು ಬರುತ್ತವೆ, ಬಿಡಬ್ಲುಎಸ್ಎಸ್ಬಿ ಕಾಮಗಾರಿಯ ಶೇಕಡ 35ರಷ್ಟು ವೆಚ್ಚ ಬರಿಸಲಿದ್ದು, 247 ಕೋಟಿ ಮಹದೇವಪುರ ವಲಯಕ್ಕೆ ಮೀಸಲಿಡಲಾಗಿದೆ, ಕೆಆರ್ಪುರ ಕ್ಷೇತ್ರದಲ್ಲಿನ ಹಳ್ಳಿಗಳಲ್ಲಿ 250 ಕಿ.ಮೀ ವಿಸ್ತಾರಕ್ಕೆ ಪೈಪ್ಲೈನ್ ಕಾಮಗಾರಿ ನಡೆಯಲಿದ್ದು, ಬಿಬಿಎಂಪಿಗೆ ಸೇರ್ಪಡೆಗೊಂಡಿರುವ ಕ್ಷೇತ್ರದ 11ಹಳ್ಳಿಗಳ ಲಕ್ಷಾಂತರ ಜನರು ಈ ಯೋಜನೆಯಿಂದ ಅನುಕೂಲ ಪಡೆಯಲಿದ್ದಾರೆ. 30ಕ್ಕೂ ಹೆಚ್ಚು ವರ್ಷಗಳ ವರೆಗೂ 110 ಹಳ್ಳಿಗಳಿಗೆ ಕುಡಿಯುವ ನೀರಿನ ಕೊರತೆಯನ್ನು ದೂರಾಗಿಸಲಿದೆ ಎಂದು ತಿಳಿಸಿದರು. ಇದೆ ವೇಳೆ ಕಲ್ಕೆರೆಯ ಎನ್ಆರ್ಐ ಬಡಾವಣೆಯಲ್ಲಿ ನಗರೋತ್ಥಾನ ಅನುದಾನದಡಿ 75ಲಕ್ಷ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆಆರ್ಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುನೇಗೌಡ, ಜಲಮಂಡಳಿ ಸದಸ್ಯ ಕಲ್ಕೆರೆ ನಾರಾಯಣ ಸ್ವಾಮಿ, ಕಸಾಪ ಅಧ್ಯಕ್ಷ ಕೃಷ್ಣಮೂತರ್ಿ, ವಾಡರ್್ ಅಧ್ಯಕ್ಷ ಮಧುಗೌಡ, ಮುಖಂಡರಾದ ಮುನಿವೆಂಕಟಪ್ಪ, ಮಾದೇಶ್, ಗಂಗಾಧರ್ ಸೇರಿದಂತೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here