ಪೈಪ್‍ಲೈನ್ ಮುರಿದು ನೀರು ಪೋಲು.

0
214

ಬಳ್ಳಾರಿ/ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣದ ಹಳ್ಳಿಕೆರೆ ಭಾಗದ ರೈತರಿಗೆ ನೀರು ಪೂರೈಸುತ್ತಿರುವ ಆರ್‍ಬಿಸಿ ಹೆಡ್ ಪೈಪ್‍ಲೈನ್ ದುರಸ್ಥಿ ಯಾಗಿರುವುದರಿಂದ ರೈತರು ಸಂಕಷ್ಠಕ್ಕೆ ಗುರಿಯಾಗಿದ್ದಾರೆ. 30 ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾಲಯ ಸಮೀಪದ ಹಳ್ಳಿಕೆರೆಯಿಂದ ಸುಮಾರು 300 ಎಕರೆ ರೈತರ ಜಮೀನಿಗೆ ನೀರಾವರಿ ಇಲಾಖೆ ವತಿಯಿಂದ ಪೈಪ್ ಲೈನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇತ್ತೀಚಿಗೆ ಪೈಪ್‍ಲೈನ್ ಮುರಿದು ನೀರು ಯಥೇಚ್ಚವಾಗಿ ಪೋಲಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಈ ಭಾಗದ ರೈತರು ವಿಷಾದ ವ್ಯಕ್ತ ಪಡಿಸಿದ್ದಾರೆ. ಪೈಪ್‍ಲೈನ್‍ಗೆ ಅಳವಡಿಸಿರುವ ಕಾಲಮ್‍ಗಳು ಸಹ ಸಂಪೂರ್ಣವಾಗಿ ಶಿತಿಲಗೊಂಡಿರುವುದರಿಂದ ನೀರು ಕೊನೆ ಭಾಗಕ್ಕೆ ಹೋಗದೆ ಅರ್ಧಕ್ಕೆ ಸೋರಿಕೆಯಾಗುತಿದ್ದು, ಅನೇಕ ಬಾರಿ ಅಧಿಕಾರಿಗಳನ್ನು ಪೈಪ್‍ಲೈನ್ ದುರಸ್ಥಿಬಗ್ಗೆ ಮನವ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಮಲಾಪುರ ರೈತರಾದ ಕೌಡೆ ಬಸುವರಾಜ, ಮಲ್ಲಿಕಾರ್ಜುನ ಹಾಗೂ ನಾರಾಯಣದಾಸ ಆರೋಪಿಸಿದ್ದಾರೆ. ಇನ್ನು ಮುಂದಾದರು ಇಲಾಖೆ ಅಧಿಕಾರಿಗಳು ಎಚ್ಚೆತ್ತು ಪೈಪ್‍ಲೈನ್ ದುರಸ್ಥಿ ಕಾರ್ಯ ಕೈಗೊಂಡು ಈ ಭಾಗದಲ್ಲಿರುವ ದಲಿತ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂಬ ಆಶಯ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here