ಕುಡುಕ ಪೊಲೀಸಪ್ಪಾ?

0
223

ಬಾಗಲಕೋಟೆ: ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ಮೇಲಿದ್ದ ವೇಳೆಯೆ ಹವಾಲ್ದಾರನೊಬ್ಬ ಎಣ್ಣೆ ಹೊಡೆದ ಘಟನೆ ನಡೆದಿದೆ.ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್ ನಗರ ಠಾಣೆ ಹವಾಲ್ದಾರ ಶಿವಪ್ಪ ಹೆಬ್ಬಾಳ ಎಂಬಾತ ಸಮವಸ್ತ್ರದ ಮೇಲೆಯೆ ಠಾಣೆಯಲ್ಲಿ ಮದ್ಯಪಾನ ಮಾಡೋದು ಕಂಡುಬಂದಿದೆ.ಶಿವಪ್ಪ ಹೆಬ್ಬಾಳ ಠಾಣೆಯ ಕಂಪ್ಯೂಟರ್ ಕೊಠಡಿಯಲ್ಲಿ ದಿನನಿತ್ಯ ಮದ್ಯಪಾನ ಮಾಡುವ ಮೂಲಕ ಠಾಣೆಯ ಪಾವಿತ್ರತೆಗೆ ಧಕ್ಕೆ ತಂದಿದ್ದಾನೆ.ಠಾಣೆಯೊಳಗಡೆ ಕುಡಿದು ಸಿಬ್ಬಂದಿಗಳ ಜೊತೆ ಅನುಚಿತವಾಗಿ ವರ್ತನೆ ಮಾಡೋದು ಈತನ ನಿತ್ಯ ಕಾಯಕವಾಗಿದೆ.ಇದರಿಂದ ಠಾಣಾ ಸಿಬ್ಬಂದಿಗಳು ರೋಷಿ ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಇತರೆ ಪೇದೆಗಳಿಗೆ ನಿಂದನೆ ಮಾಡುತ್ತಾ ಠಾಣೆಯಲ್ಲಿ ಅಂದಾ ದರ್ಬಾರ ನಡೆಸಿದ್ದಾನೆ.ಪಿ ಎಸ್ ಐ ಇಲ್ಲದ ವೇಳೆಯಲ್ಲಿ ಠಾಣೆಯೊಳಗೆ ಕುಳಿತು ಮದ್ಯಪಾನ ಮಾಡುವ ದೃಶ್ಯ ಸೆರೆ ಸಿಕ್ಕದೆ.ಈತನ ಮೇಲೆ ಕ್ರಮಕೈಗೊಳ್ಳಬೇಕೆಂದು ಠಾಣೆ ಪೇದೆಗಳು ಆಗ್ರಹ ಮಾಡಿದ್ದಾರೆ..

LEAVE A REPLY

Please enter your comment!
Please enter your name here