ಪೊಲೀಸ್ ನಾಯಿಗಳಿಗೆ ಕೂಲರ್ ವ್ಯವಸ್ಥೆ

0
193

ಬಳ್ಳಾರಿ : ಬಿಸಿಲಿಗೆ ಸುಸ್ತಾದ ಪೊಲೀಸ್ ನಾಯಿಗಳು,• ಪೊಲೀಸ್ ನಾಯಿ ತಣ್ಣಗಿರಲು ಎಳನೀರು ಕೊಡ್ತಾರೆ, ಬಿಸಿಲಿಗೆ ಬೆದರಿದ ನಾಯಿಗಳಿಗೆ ತಣ್ಣತಣ್ಣನೆ ವ್ಯವಸ್ಥೆ

ಕಾದ ಕೆಂಡದಂತಿರುವ ಸೂರ್ಯನ ಪ್ರಪಾತಕ್ಕೆ ಗಣಿನಾಡು ಬಳ್ಳಾರಿ ಜನತೆ ಬೆದರಿದ್ದಾರೆ. ಮನುಷ್ಯನ ಪಾಡೇ ಹೀಗಿದ್ದರೆ ನಾಯಿ ಪಾಡು ಇನ್ಹೇಗಿರುತ್ತೆ? ಅದಕ್ಕೆ ಬಳ್ಳಾರಿಯ ಪೊಲೀಸರು ತಮ್ಮ ನಾಯಿಗಳನ್ನು ತಣ್ಣಗಿಡಲು ನಿರ್ಧರಿಸಿದ್ದಾರೆ. ಕೂಲರ್ ಹಾಕಿ ಬಳ್ಳಾರಿ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಖಾಕಿ ಪಡೆ ಮುಂದಾಗಿದ್ದಾರೆ.
ನಾವು ಮಾತೆತ್ತಿದರೆ, ಬೈಗುಳ ಸಮಯದಲ್ಲಿ ನಿನಗೆ ನಾಯಿ ಪಾಡೇ ಗತಿ ಅಂತೀವಿ. ಆದರೆ ಬಳ್ಳಾರಿಯ ಪೊಲೀಸ್ ನಾಯಿಗಳ ಪರಿಸ್ಥಿತಿ ನೋಡುತ್ತಿದ್ದರೆ ನಾಯಿ ಪಾಡು ಎಷ್ಟೋ ಉತ್ತಮ, ಅದು ಅನಿವಾರ್ಯ ಎಂದನಿಸುತ್ತೆ. ಸದ್ಯ ಮನುಷ್ಯನ ಪಾಡೇ ಕೇಳಬೇಡಿ ಎಂಬಂತಿದೆ. ಬಳ್ಳಾರಿಯ ಡಿ ಎ ಆರ್ ಮೈದಾನದ ಕೊಠಡಿಯಲ್ಲಿರುವ ಐದು ವಿದೇಶಿ ತಳಿಯ ನಾಯಿಗಳಿಗೆ ರಾಯಲ್ ಟ್ರೀಟ್ ಮೆಂಟ್. ಅದು ಅನಿವಾರ್ಯ ಕೂಡ. ಯಾಕೆಂದರೆ ಬಳ್ಳಾರಿಯ ಬಿಸಿಲಿಗೆ ಬೆದರಿರುವ ಪೊಲೀಸ್ ನಾಯಿಗಳು ಬದುಕಿಳಿಯುವುದು ಕಷ್ಟ. ಈ ಕಾರಣಕ್ಕೆ ಪೊಲೀಸರು ತಮ್ಮ ನಾಯಿಗಳಿಗೆ ಕೂಲರ್ ವ್ಯವಸ್ಥೆ ಮಾಡಿದ್ದಾರೆ. ತಂಪು ಹವಾಮಾನ ಹೊಂದಿರುವ ಕೆನಡಾ ಮತ್ತು ಜರ್ಮನಿ ದೇಶಗಳ ಡಾಬರ್ ಮನ್, ಲ್ಯಾಬ್ರಡಾರ್ ತಳಿಯ ನಾಯಿಗಳಿಗೆ ಬಿಸಿಲು ತಡಿದುಕೊಳ್ಳುವ ಶಕ್ತಿ ಇರುವುದಿಲ್ಲ.
ಚೇತನ್ ಆರ್. ಬಳ್ಳಾರಿ ಜಿಲ್ಲಾ ಎಸ್ಪಿ ಹೇಳುವ ಪ್ರಕಾರ ಇನ್ನು ಇಲ್ಲಿಯ ಐದು ನಾಯಿಗಳಿಗೆ ವಾರದಲ್ಲಿ ಎರಡು ಬಾರಿ ಎಳೆನೀರು ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ದ್ರವ ಪದಾರ್ಥಗಳಾದ ಗ್ಲೂಕಾನ್ ಡಿ ಹಾಗೂ ಶಕ್ತಿವರ್ಧಕ ಪೇಯಗಳನ್ನು ನೀಡಲಾಗುತ್ತಿದೆ. ಬಳ್ಳಾರಿ ಜಿಲ್ಲೆ ಹೇಳಿಕೇಳಿ ಬಿಸಿಲಿಗೆ ಫೇಮಸ್ಸು. ಪ್ರತಿದಿನ ಸರಾಸರಿ 40 ಡಿಗ್ರಿ ಉಷ್ಣಾಂಶವಿದೆ. ಕಳೆದ ವಾರ ಅಂತೂ 42 ಡಿಗ್ರಿ ದಾಟಿದೆ. ಈ ಕಾರಣಕ್ಕೆ ಬಳ್ಳಾರಿ ಜನತೆ ಬಿಸಿಲಿನ ಹೊಡೆತಕ್ಕೆ ತತ್ತಿರಿಸಿದ್ದಾರೆ.ನಾವಾದ್ರೂ ಬೆವರಿನ ಮೂಲಕ ತಾಪಮಾನ ಕಡಿಮೆಯಾಗುತ್ತದೆ. ಆದರೆ ನಾಯಿಗಳಿಗೆ ಬಾಯಿ ಮೂಲಕ ತಾಪಮಾನ ವನ್ನು ಕಡಿಮೆ ಮಾಡಿಕೊಳ್ಳುತ್ತೆ. ಈ ಕಾರಣಕ್ಕೆ ಬೇಸಿಗೆ ಕಾಲದಲ್ಲಿ ಪೊಲೀಸ್ ವಿದೇಶಿ ತಳಿಯ ನಾಯಿಗಳಿಗೆ ಕೂಲರ್ ಅನಿವಾರ್ಯ. ಸಿದ್ದನ ಗೌಡ ವೈ ಪಾಟೀಲ್, ಡಿವೈಎಸ್ಪಿ ಡಿಎಆರ್ ಪಡೆ ಹೇಳಿಕೆ ಟ್ಟಿನಲ್ಲಿ ಬಿಸಿಲಿನ ತಾಪಮಾನದಿಂದ ಕಡಿಮೆ ಮಾಡಲು ಮನುಷ್ಯರು ಎಸಿ, ಕೂಲರ್, ಪೇಯಗಳ ಮೊರೆ ಹೋದಂತೆ, ಪೊಲೀಸ್ ನಾಯಿಗಳಿಗೂ ಇದೇ ಸೌಲಭ್ಯ ಸಿಗುತ್ತದೆ. ಆದರೆ ಬೀದಿಬದಿಯಪ್ರಾಣಿಗಳು, ಜಾನುವಾರಗಳ ಪರಿಸ್ಥಿತಿಯನ್ನು ಯಾರುಕೇಳೋರು? ಓ ಸೂರ್ಯ ದೇವ ಸ್ವಲ್ಪ ತಣ್ಣಗಾಗು ಎಂದುಬೇಡಿ ಕೊಳ್ಳಬೇಕಷ್ಟೆ…!

LEAVE A REPLY

Please enter your comment!
Please enter your name here