ಪೋರ್ಟಲ್ ವ್ಯವಸ್ಥೆಗೆ ವಿರೋಧ : ಎಪಿಎಂಸಿ ಬಂದ್

0
172

ಆನ್ ಲೈನ್ ಇ-ಪೇಮೆಂಟ್ ಆಂಡ್ ಟ್ರೇಡಿಂಗ್ ಪೋರ್ಟಲ್ ವ್ಯವಸ್ಥೆಗೆ ವಿರೋಧ : ಎಪಿಎಂಸಿ ಬಂದ್

ಮೈಸೂರು: ಜನ ಜಂಗುಳಿಯಿಂದ ಗಿಜಿಗುಡುತಿದ್ದ ಮೈಸೂರಿನ ಎಪಿಎಂಸಿ ಮಾರುಕಟ್ಟೆಗಳು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದು ಮಾರುಕಟ್ಟೆ ಸಂಪೂರ್ಣ ಬಣಗುಟ್ಟುತ್ತಿದೆ.

ರೈತರು ಉತ್ಪನ್ನಗಳನ್ನು ಖರೀದಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಖಂಡಿಸಿ ರಾಜ್ಯದ ಎಲ್ಲಾ ೧೪೪ ಎಪಿಎಂಸಿ ಮಾರುಕಟ್ಟೆಗಳು ಬುಧವಾರ ತನ್ನ ಕಾರ್ಯ ಸ್ಥಗಿತಗೊಳಿಸಿದ್ದು, ಮೈಸೂರಿನಲ್ಲಿಯೂ ಬೆಂಬಲ ವ್ಯಾಕ್ತವಾಗಿದೆ.

ಮೈಸೂರಿನಲ್ಲಿ ಎಪಿಎಂಸಿ ಮಾರುಕಟ್ಟೆಯನ್ನು ಸ್ಥಗಿತಗೊಳಿಸಿದ ವ್ಯಾಪಾರಸ್ಥರು ಮಾತನಾಡಿ ರಾಜ್ಯ ಸರ್ಕಾರ ಎಪಿಎಂಸಿಗಳಲ್ಲಿ  ರೈತರ ಉತ್ಪನ್ನಗಳನ್ನು ಖರೀದಿಸಲು ಆನ್ ಲೈನ್ ಇ-ಪೇಮೆಂಟ್ ಆಂಡ್ ಟ್ರೇಡಿಂಗ್ ಪೋರ್ಟಲ್ ವ್ಯವಸ್ಥೆ ಜಾರಿಗೆ ತಂದು ಅದರ ನಿರ್ವಹಣೆಯ ಹೊರೆಯನ್ನು ರೆಮ್ಸ್ ಎಂಬ ಖಾಸಗಿ ಕಂಪನಿಗೆ ವಹಿಸಿದೆ. ಅದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಹಬ್ಬದ ಸಂದರ್ಭದಲ್ಲಿ ಬಂದ್ ಮಾಡುತ್ತಿರುವುದರಿಂದ ಒಂದೇ ದಿನ ರಾಜ್ಯಾದ್ಯಂತ ಸುಮಾರು ಒಂದು ಸಾವಿರ ಕೋಟಿ ರೂ.ವ್ಯವಹಾರ ನಷ್ಟವಾಗುವ ಸಂಭವವಿದೆ.

LEAVE A REPLY

Please enter your comment!
Please enter your name here