ಪೋಲಿಯೋ ಲಸಿಕೆ  ಕಡ್ಡಾಯವಾಗಿ ಹಾಕಿಸಿ

0
261

ಚಿಕ್ಕಬಳ್ಳಾಪುರ/ಗುಡಿಬಂಡೆ: ಮಕ್ಕಳನ್ನು ಕಾಡುವ ಪೋಲಿಯೊ ರೋಗ ಅವರ ಭವಿಷ್ಯವನ್ನೇ ಹಾಳು ಮಾಡುವ ಸಾಧ್ಯತೆ ಇರುವಕಾರಣ ಮುಂಜಾಗೃತ ಕ್ರಮವಾಗಿ ಪೋಷಕರು ತಮ್ಮ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊಲಸಿಕೆ ಹಾಕಿಸಿ ಎಂದು ಪ.ಪಂ. ಅಧ್ಯಕ್ಷ ಜಿ.ಎಸ್.ಚಂದ್ರಶೇಖರ ನಾಯ್ಡು ತಿಳಿಸಿದರುಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಅವರು ಸಣ್ಣ ಮಕ್ಕಳನ್ನು ಅತ್ಯಂತ ಭಯಾನಕವಾಗಿ ಕಾಡುವ ಈ ಪೋಲಿಯೋ ಕಾಯಿಲೆಮಕ್ಕಳ ಭವಿಷ್ಯಕ್ಕೆ ಮಾರಕವಾಗಿದ್ದು, ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದರಿಂದ ಅಂಗವೈಕಲ್ಯತಡೆಯಬಹುದು ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಆರೋಗ್ಯಕಾಪಾಡಿಕೊಳ್ಳಬೇಕು. ಪೋಲಿಯೋ ಎಂಬುದು ಅಂಗವಿಕಲತೆ ಉಂಟು ಮಾಡುವ ಸಾಂಕ್ರಾಮಿಕರೋಗವಾಗಿರುವುದರಿಂದ ಪೋಷಕರು ಈ ಬಗ್ಗೆ ನಿರ್ಲಕ್ಷ್ಯ ತೋರದೇ ತಮ್ಮ ೫ ವರ್ಷದೊಳಗಿನ ಮಕ್ಕಳಿಗೆಪೋಲಿಯೋ ಲಸಿಕೆ ಹಾಕಿಸಬೇಕೆಂದು ಸಲಹೆ ನೀಡಿದರು.

ನಂತರ ಸಾರ್ವಜನಿಕ ಆಸ್ಪತ್ರೆಯ ತಾಲ್ಲೂಕು ಆರೋಗ್ಯಾಧಿಕಾರಿ ಮಹಿಮಾ ಮಾತನಾಡಿ ದೇಶವನ್ನುಪೋಲಿಯೋ ಮುಕ್ತಗೊಳಿಸಲು ಆರೋಗ್ಯ ಇಲಾಖೆಯ ಮೂಲಕ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುತ್ತಿದ್ದುಪೋಷಕರು, ನಾಗರಿಕರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಘ ಸಂಸ್ಥೆಗಳಪದಾಧಿಕಾರಿಗಳು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಲು ಸಹಕಾರ ನೀಡಬೇಕು.ಕುಡಿಯುವ ಕಲುಷಿತ ನೀರಿನ ಬಳಕೆ ಮೂಲಕ ಸಾಮಾನ್ಯವಾಗಿ ಇಂತಹ ರೋಗ ಹರಡುವ ಸಾಧ್ಯತೆಗಳುಹೆಚ್ಚಾಗಿರುವ ಕಾರಣ ೫ ವರ್ಷದ ಒಳಗಿರುವ ಎಲ್ಲಾ ಮಕ್ಕಳಿಗೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅನಿವಾರ್ಯ ಕಾರಣಗಳಿಂದ ಮಕ್ಕಳು ಪೋಲಿಯೋಕೇಂದ್ರಗಳಿಗೆ ಬರದೇ ಇದ್ದ ಪಕ್ಷದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ೨ ದಿನ ಹಾಗೂ ನಗರ ಪ್ರದೇಶಗಳಲ್ಲಿ ೩ ದಿನಅಂಗನವಾಡಿ, ಆಶಾ ಕಾರ್ಯಕರ್ತೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮನೆಗಳಿಗೆ ಭೇಟಿ ನೀಡಿ ಬಿಟ್ಟುಹೋದ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ನರಸಿಂಹಮೂರ್ತಿ, ಭಾರತೀಯರೆಡ್‌ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ವಕೀಲ ಉನ್ನತಿ ವಿಶ್ವನಾಥ್, ಪಟ್ಟಣ ಪಂಚಾಯತಿಯ ಆರೋಗ್ಯನಿರೀಕ್ಷಕ ಶಿವಣ್ಣ, ಕನ್ನಡ ಸೇನೆಯ ಅಂಬರೀಶ್, ಆಸ್ಪತ್ರೆ ಸಿಬ್ಬಂದಿಯಾದ ಫಯಾಜ್, ಲಕ್ಷ್ಮೀಪತಿ ಸೇರಿದಂತ ಹಲವರು ಇದ್ದರು.

LEAVE A REPLY

Please enter your comment!
Please enter your name here