ಪೋಲಿ ಪೋಲಿಸಪ್ಪನ ಲವ್ವಿ ಡುವ್ವಿ ….

0
629

ವಿಜಯಪುರ/ಇಂಡಿ: ತಾಲೂಕಿನ ಹೊರ್ತಿ ಪಿಎಸ್ ಐ ಪ್ರಕಾಶ ರಾಠೋಡ ಒರ್ವ ಯುವತಿಗೆ ಪ್ರೀತಿಸಿ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಬಾಗಲಕೋಟ ಜಿಲ್ಲೆ ಬನಹಟ್ಟಿ ಯವರಾದ ಸಂತ್ರಸ್ಥೆಯೊಂದಿಗೆ ಪ್ರಕಾಶ ರಾಠೋಡ ಬನಹಟ್ಟಿಯಲ್ಲಿ ಕಾರ್ಯ ನಿರ್ವಹಿಸುವಾಗ ವಾಟ್ಸಪ್ ನಲ್ಲಿ ಚ್ಯಾಟ್ ಮಾಡಿ ಸ್ನೇಹ ಬೆಳಸಿದ್ದಾನೆ. ನಂತರ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿದ್ದರಂತೆ. ಆದ್ರೆ ಪ್ರಕಾಶ ವಿಜಯಪುರದ ಇಂಡಿ ತಾಲೂಕಿನ ಹೊರ್ತಿ ಠಾಣೆಗೆ ವರ್ಗಾವಣೆ ಆದ ಮೇಲೆ ಸಂತ್ರಸ್ಥೆಯನ್ನು ದೂರ ಇಟ್ಟಿದ್ದಾನಾಂತೆ. ಇದರಿಂದ ಮನನೊಂದು ಸಂತ್ರಸ್ಥೆ ಬಾಗಲಕೋಟ ಎಸ್ಪಿಯವರಿಗೂ ಪ್ರಕಾಶ ಮಾಡಿದ ಅನ್ಯಾಯದ ಬಗ್ಗೆ ದೂರು ನಿಡಿದ್ದಾರೆಂದು ತಿಳಿದುಬಂದಿದೆ. ಆದ್ರೆ ಇದು ವರೆಗೂ ಸಂತ್ರಸ್ಥೆ ನ್ಯಾಯ ದೊರಕಿಲ್ಲ ಅನ್ನೋದು ಸಂತ್ರಸ್ಥೆಯ ಅಳಲು.

ಹೇಳಿಕೆ: ಪಿಎಸ್ ಐ ಪ್ರಕಾಶ ರಾಠೋಡ ಅವರನ್ನು ಕೇಳಿದ್ರೆ, ಇದು ನನ್ನ ವಿರುದ್ಧ ಮಾಡಿರೋ ಕುತಂತ್ರ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಘಟನೆ ಆಗಿದ್ದು ಬನಹಟ್ಟಿನಲ್ಲಿದ್ದಾಗ, ಆದ್ರೆ ನನಗೆ ಯಾವುದೇ ಯುವತಿ ಜೊತೆಗೆ ಸಂಬಂಧವಿಲ್ಲ. ಇದು ಬನಹಟ್ಟಿಯ ಗುಂಡಾಪಡೆ ಮಾಡಿರೋ ಕುತಂತ್ರವಾಗಿದೆ ಎಂದ್ರು…

ವರದಿ:ನಮ್ಮೂರು ಟಿವಿ ನಂದೀಶ
ಸಿಂದಗಿ-9880624377

LEAVE A REPLY

Please enter your comment!
Please enter your name here