ಗ್ರಾಮಸ್ಥರಿಂದ ಶಿಕ್ಷಕಾರಿಗೆ ತರಾಟೆ.

0
140

ಮಂಡ್ಯ/ಮಳವಳ್ಳಿ:ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಹುಳುಕು ಮತ್ತು ಕೊಳಕಾದ ಬೇಳೆಕಾಳುಗಳನ್ನು ಬಳಸುತ್ತಿದ್ದ ಪ್ರಕರಣ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾದಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಗ್ರಾಮದ ಶಾಲೆಯಲ್ಲಿ ಊಟ ಮಾಡಿ ಬರ್ತಿದ್ದ ಮಕ್ಕಳು ಮನೆಯಲ್ಲಿ ವಾಂತಿ ಭೇದಿ ಮಾಡಿಕೊಳ್ತಿದ್ರು ಎನ್ನಲಾಗಿದ್ದು ಇದ್ರಿಂದ ಅನುಮಾನಗೊಂಡ ಗ್ರಾಮಸ್ಥರು ಇಂದು ಶಾಲೆಗೆ ತೆರಳಿ‌ ಬಿಸಿಯೂಟದ ಪದಾರ್ಥಗಳ ನ್ನು ಪರಿಶೀಲಿಸಿದಾಗ ಶಾಲೆಯಲ್ಲಿ ಮಕ್ಕಳಿಗೆ ಕೊಳಕು ಮತ್ತು ಹುಳಿತ್ತಿದ್ದ ಬೇಳೆ ನೀಡ್ತಿರೋದು ಬೆಳಕಿಗೆ ಬಂದಿದೆ. ಈ ರೀತಿಯ ಬೇಳೆ ವಿದ್ಯಾರ್ಥಿಗಳ ಬಿಸಿಯೂಟದಲ್ಲಿ ಬಳಸ್ತಿರೋ ಬಗ್ಗೆ ಗ್ರಾಮಸ್ಥರು ಶಾಲೆಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಈ ಪ್ರಕರಣ ಮುಚ್ಚಿ ಹಾಕಲು ಶಿಕ್ಷಕರು ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ.ಮಕ್ಕಳಿಗೆ ಕೊಳಕು‌ ಬೇಳೆ ನೀಡಿ.ಮಕ್ಕಳ ಅಸ್ವಸ್ಥತೆ ಗೆ ಕಾರಣರಾದ ಶಿಕ್ಷಕರ ವಿರುದ್ದ  ಸಂಬಂಧಪಟ್ಟವರು ಕ್ರಮ ಜರುಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

ಮಳವಳ್ಳಿದಿಂದ   ಲೋಕೇಶ್      ನಮ್ಮೂರುಟಿವಿ

LEAVE A REPLY

Please enter your comment!
Please enter your name here