ಪೌರಕಾರ್ಮಿಕರಿಗೆ ಹಣ ಹಂಚಿದ ಮಾಜಿ ಶಾಸಕ !

0
203

* ದಸರಾ ಖುಷಿಗಾಗಿ ಪೌರ ಕಾರ್ಮಿಕರಿಗೆ ಹಣ ಹಂಚಿದ ಮಾಜಿ ಶಾಸಕ !

* ಹಣ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಕ್ಯೂ ನಿಂತ ಪೌರ ಕಾರ್ಮಿಕರು !

* ಪೌರ ಕಾರ್ಮಿಕರಿಗೆ ಗರಿ ಗರಿ ನೋಟು ಹಂಚಿದ ಸೂರ್ಯನಾರಾಯಣ ರೆಡ್ಡಿ !

ಬಳ್ಳಾರಿ /ಬಳ್ಳಾರಿ:ದಸರಾ ಹಬ್ಬದ ನಿಮಿತ್ಯ ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ ದಸರಾ ಖುಷಿಗಾಗಿ ಭಕ್ಷೀಸ್ ಕೊಡೋದು ಮಾಮೂಲು, ಆದ್ರೆ ದಸರಾ ಹಬ್ಬದ ಭಕ್ಷೀಷ್ ಪಡೆಯಲು ಸಾವಿರಾರು ಪೌರ ಕಾರ್ಮಿಕರು ಸಾಲು ಸಾಲಾಗಿ ಕ್ಯೂ ನಿಂತು ಹಣ ಪಡೆಯಲು ಮುಗಿಬಿದ್ದ ಘಟನೆ ಬಳ್ಳಾರಿಯಲ್ಲಿ ‌ನಡೆಯಿತೂ, ಬಳ್ಳಾರಿಯಮಾಜಿ ಶಾಸಕ ಹಾಗೂ ಗ್ರಾನೈಟ್ ಉದ್ಯಮಿ ಸೂರ್ಯನಾರಾಯಣ ರೆಡ್ಡಿ ಪ್ರತಿ ವರ್ಷ ದಸರಾದಂದೂ ಖುಷಿಗಾಗಿ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಭಕ್ಷೀಷ ಕೊಡುವ ಪದ್ದತಿ ಹೊಂದಿದ್ದಾರೆ, ಹೀಗಾಗಿ ಹಬ್ಬದ ಖುಷಿ ಪಡೆಯಲು ಇಂದು ಸಾವಿರಾರು ಸಂಖ್ಯೆಯಲ್ಲಿ ಪೌರ ಕಾರ್ಮಿಕರು ರೆಡ್ಡಿಯವರ ಗಾಂಧಿನಗರ ಕಚೇರಿಯ ಮಂದೆ ಸಾಲು ಸಾಲಾಗಿ ಕ್ಯೂ ನಿಂತೂ ಭಕ್ಷೀಷ್ ಪಡೆಯಲು ನೂಕು ನುಕ್ಕಲು ನಡೆಸಿದರು, ಸೂರ್ಯ ನಾರಾಯಣಯವರ ಕಚೇರಿ ಸಿಬ್ಬಂದಿಗಳು ಗನ್‌ಮ್ಯಾನಗಳು ಕಾರ್ಮಿಕರನ್ನು ತಡೆಯಲು ಎಷ್ಠೆ ಪ್ರಯತ್ನ ಪಟ್ಟರೂ ಪೌರ ಕಾರ್ಮಿಕರು‌ ಮಾತ್ರ ಮುಗಿಬಿದ್ದು ಗಣಿ ಧಣಿಯಿಂದ ಗರಿ ಗರಿ ನೋಟುಗಳ ಭಕ್ಷಿಷ್ ಪಡೆದು
ಸೂರ್ಯನಾರಾಯಣ ರೆಡ್ಡಿಯವರ ಕಾಲಿಗೆ‌ ನಮಸ್ಕರಿಸಿ ಕೃತಜ್ಞತೆ ವ್ಯಕ್ತಪಡಿಸಿದರು, ಹೀಗಾಗಿ ಕೆಲ ಕಾಲ ಬಳ್ಳಾರಿಯ ಗಾಂಧೀನಗರದ ರಸ್ತೆಯ ತುಂಬೆಲ್ಲಾ ಜನವೋ ಜನ.

LEAVE A REPLY

Please enter your comment!
Please enter your name here