ಪೌರ ನೌಕರರ ಸಕ್ರಮಾತಿಗೆ ಆಗ್ರಹಿಸಿ ಪ್ರತಿಭಟನೆ

0
163

ವಿಜಯಪುರ/ಸಿಂದಗಿ:ತಾಲೂಕಿನ ಸಿಂದಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ಅಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರಿಗೆ ನಾನಾ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಪುರಸಭೆ ಕಾರ್ಯಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ತಾಲೂಕಾ ಕಚೇರಿಗೆ ತೆರಳಿತು. ಈ ಸಂದರ್ಭದಲ್ಲಿ ಕೆಲವು ಪೌರ ನೌಕರರು ಮಾತನಾಡಿ, ಸುಪ್ರೀಂ ಆದೇಶದಂತೆ ೪ ಷರತ್ತುಗಳನ್ನು ಪೂರೈಸಿರುವ ಸರಕಾರ ಗ್ರೂಪ್ ಸಿ ಹಾಗು ಡಿ ವರ್ಗದ ದಿನಗೂಲಿ ನೌಕರರ ಸಕ್ರಮಾತಿ ಪ್ರಕರಣ ಬಾಕಿ ಇದ್ದು ಮುಂಬರುವ ಮಾ. ೩೧ ರ ವರೆಗೆ ಮುಂದುವರೆಸುವುದು. ಹರಿಯಾಣ, ಪಂಜಾಬ್. ಹಾಗು ಉತ್ತರ ಪ್ರದೇಶ ರಾಜ್ಯಗಳಲ್ಲಿ ಪೌರ ಕಾರ್ಮಿಕರಿಗೆ ಎಸ್ಡಿಎ ವೇತನ ನೀಡುವುದು. ಸಮಾನ ಕೆಲಸ ಸಮಾನ ವೇತನ ಸಕ್ರಮಗೊಳಿಸುವುದು. ರಾಜ್ಯ ನಗರ… ಸ್ಥಳೀಯ. ಸಂಸ್ಥೆಗಳ ವಿವಿಧ ವೃಂದದಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ನೀಡಲು ತಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದ ನೌಕರರ ವೇತನ ಬಿಡುಗಡೆಗೆ ಆದೇಶ. ಪೌರ ನೌಕರರ ನೇಮಕಾತಿ ಸರಕಾರದ ವಿಶೇಷ ನಿಯಮಾವಳಿಯ ಕೆಲವು ನ್ಯೂನತೆ ತಿದ್ದುಪಡಿ, ೪೫ರ ವಯೋಮಿತಿ ೫೦ರ ವರೆಗೆ ಹೆಚ್ಚಿಸುವುದು. ಡಿ ವೃಂದದ ನೌಕರರನ್ನು ಸಕ್ರಮಗೊಳಿಸುವುದು. ಎಸೆಫ್ಸಿ ಅನುದಾದಡಿ ಇವರ ವೇತನ ನೀಡುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪೌರ; ನೌಕರರ ಸಂಘದ ತಾಲುಕಾ ಅಧ್ಯಕ್ಷ ಕಲ್ಲಪ್ಪ ಚೌರ, ಆರೋಗ್ಯಾಧಿಕಾರಿ ಎ. ಎಸ್. ಪಾಂಡೆ ಸೇರಿದಂತೆ ಪುರುಷ ಹಾಗು ಮಹಿಳಾ ನೌಕರರು ಪಾಲ್ಗೊಂಡಿದ್ದರು.

ನಮ್ಮೂರು ಟಿವಿ
ನಂದೀಶ ಹಿರೇಮಠ ಸಿಂದಗಿ

LEAVE A REPLY

Please enter your comment!
Please enter your name here