ಪ್ರಗತಿ ಪರಿಶೀಲನಾ ಸಭೆ

0
127

ರಾಯಚೂರು.ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಮತ್ತು ರಸ್ತೆಯ ಕಾಮಗಾರಿಗಳನ್ನು ಮುಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ರಾಯಚೂರು ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಕೆಲಸ ಮಂದಗತಿಯಲ್ಲಿ ನಡೆಯುತ್ತಿದ್ದು ಯಕ್ಲಾಸಪೂರು ಮತ್ತು ಹೊಸೂರು ಹತ್ತಿರ ನಡೆಯುತ್ತಿದ್ದ ನೂರು ಶುದ್ದಿಕರಣ ಘಟಕ ಕಾಮಗಾರಿ ವೇಗ ಆರಂಭಿಸಬೇಕು.ಮತ್ತು ಸಿಂಧನೂರು ನಗರದಲ್ಲಿ ನಡೆಯುತಿದ್ದ ಒಳ ಚರಂಡಿ ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸಬೇಕು ಎಂದರು.

ಅಮೃತ ನಗರ ಯೋಜನೆಯಲ್ಲಿ ಕೈಗತ್ತುಕೊಂಡ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಆಮೆಗತಿಯಲ್ಲಿವೆ.ಗ್ರಾಮ ವಿಕಾಸ ಯೋಜನೆಯಲ್ಲಿ ಸುಮಾರು 2250.00 ಲಕ್ಷ ಹಣ ಬಿಡುಗಡೆಯಾಗಿದ್ದು.259.42 ಲಕ್ಷ ರೂ.ಮಾತ್ರ ಇಲ್ಲಿಯವರೆಗೆ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದೆ ಇನ್ನು 1849.06 ಲಕ್ಷ ರೂ ಖರ್ಚಾಗಬೇಕಾಗಿದೆ ಉಳಿದಿದ್ದು ಉಳಿದ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದರು.
ರಾಜಿವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 6 ವಸತಿ ಯೊಜನೆಯ 2016-17 ಮತ್ತು 2017-18 ನೇ ಸಾಲಿನಲ್ಲಿ ಒಟ್ಟು 42,225 ಮನೆಗಳು ಅರ್ಜಿಗಳಲ್ಲಿ 19,115 ಅರ್ಜಿಗಳನ್ನು ಪರಿಷ್ಕರಿಸಿ 13,841 ಆಯ್ಕೆ ಮಾಡಲಾಗಿದ್ದು ಮನೆಗಳ ಇಲ್ಲದವರಿಗೆ ಹಂಚಿಕೆಯಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೌತಮ್ ಬಘಾಧಿ,ಜಿ.ಪಂ.ಸಿಇಓ ಎಂ.ಕೂರ್ಮರಾವ್ ಸೇರಿದಂತೆ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here