ಪ್ರತಿಭಟನೆ ಹಾಗೂ ರಸ್ತೆತಡೆ.

0
351

ಮಂಡ್ಯ/ಮಳವಳ್ಳಿ: ಡಿ.ಕೆ ಶಿವ ಕುಮಾರರವರ ತೇಜೋವದೆ ಮಾಡಲು ಹುನ್ನಾರ ಮಾಡಲು ಹೊರಟ ಕೇಂದ್ರ ಸಕಾ೯ರ ದ ವಿರುದ್ದ ಮಳವಳ್ಳಿ ಕಾಂಗ್ರೆಸ್ ಘಟಕ ಮಳವಳ್ಳಿ ಯಲ್ಲಿ ಮೋದಿ ಹಾಗೂ ಅಮಿತಾಶಾ ರವರ ಫೈಕ್ಸ್ ಯನ್ನು ದಹಿಸಿ ಪ್ರತಿಭಟನೆ ಹಾಗೂ ರಸ್ತೆತಡೆ ನಡೆಸಿದರು. ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ಕೇಂದ್ರ ಸಕಾ೯ರ ದ ವಿರುದ್ದ ಘೋಷಣೆ ಕೂಗುತ್ತಾ ಪ್ರಮುಖ ಬೀದಿಗಳ ಮೂಲಕ ಅನಂತ ರಾಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ನಿಮಿಷ ರಸ್ತೆತಡೆ ನಡೆಸಿದರು. ನಂತರ. ಟೈರ್ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟರಾಮು ಮಾತನಾಡಿ, ಕಾಂಗ್ರೇಸ್ ಸರ್ಕಾರದ ಉತ್ತಮ ಆಡಳಿತವನ್ನು ಸಹಿಸಲಾರದೆ ಕೇಂದ್ರ ಸಕಾ೯ರದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರದಾನಿ ಮಂತ್ರಿ ಮೋದಿರವರು ಮುಂದಿನ ಬಾರಿ ಅಧಿಕಾರ ತಪ್ಪಿಸಲು ಈ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ತಾ. ಪಂ ಅಧ್ಯಕ್ಷ ಆರ್ .ಎನ್ ವಿಶ್ವಾಸ್ , ಉಪಾಧ್ಯಕ್ಷ. ಮಾಧು, ಜಿ.ಪಂ ಸದಸ್ಯ ಹಾಗೂ ವಿರೋದ ಪಕ್ಷ ದ ನಾಯಕ ಹನುಮಂತು. ನಾಗೇಶ, ಮಹದೇವಪ್ರಸಾದ್, ಸೇರಿದಂತೆ ಮತ್ತಿತ್ತರರು ಇದ್ದರು.

LEAVE A REPLY

Please enter your comment!
Please enter your name here