ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

0
311

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ :ಸಾಧಕರ ಆದರ್ಶಗಳನ್ನು ಅಳವಡಿಸಿಕೊಂಡ ಯುವ ಶಕ್ತಿಯಿಂದ ಉತ್ತಮ ಸಮಾಜ ನಿರ್ಮಾಣ ವಾಗಲಿ, ವಿದ್ಯಾರ್ಥಿಗಳಿಂದ ಎಂದು ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಜಿಲ್ಲಾ ಸಂಘಟನ ಕಾರ್ಯದರ್ಶಿ ಹಾಗೂ ಎಸ್ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಹೇಳಿದರು.

ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗ ಇರುವ ಎಸ್ಎನ್ ಕ್ರಿಯಾ ಟ್ರಸ್ಟ್ ಜನ ಸೇವಾ ಕೇಂದ್ರ ವತಿಯಿಂದ ಕಛೇರಿಯಲ್ಲಿ ನಡೆದ

ಎರಡನೇ ಹಂತದ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳ ಮತ್ತು ತಾಲ್ಲೂಕಿನ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಾನಾತರದ ಕಷ್ಟಗಳನ್ನು ಅನುಭವಿಸಿ ಪೋಷಕರು ತಮ್ಮ ಮಕ್ಕಳನ್ನು ಬೆಳಸುವ ನಿಟ್ಟಿನಲ್ಲಿ ವಿದ್ಯಾಬ್ಯಾಸ ಕೊಡಿಸುತ್ತಾರೆ.

ವಿದ್ಯಾಭ್ಯಾಸ ಪಡೆದುಕೊಂಡ ಯುವಕರು ತಮ್ಮ ಮೇಲಿಟ್ಟಿರುವ ಒಳ್ಳೆಯ ಬದಲಾವಣೆ ಕಾಣುವಂತಾಗಲಿ ಎನ್ನುವ ಪೋಷಕರ ನಂಬಿಕೆಯನ್ನು ಉಳಿಸಲು ದುಷ್ಚಟಗಳಿಂದ ದೂರ ಉಳಿದು ಉಜ್ವಲ ಭವಿಷ್ಯಕ್ಕೆ ಪೂರಕ ಆಗುವಂತಾಗಲು ಸಾಧಕರ ಹಲವಾರು
ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರತಿಭಾ ಪುರಸ್ಕಾರ : ಬೆಳ್ಳಿ ಪಧಕ, ಪ್ರಶಂಸಾ ಪತ್ರ ನೀಡಿ ಸುಮಾರು 200 ವಿದ್ಯಾರ್ಥಿಗಳಿಗೆ ಹಾಗೂ ಸಾಧಕರ ಸನ್ಮಾನ ತಾಲ್ಲೂಕಿನಲ್ಲಿ ಪ್ರಪ್ರಥಮವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ ಖಂಡೇರಾವ್ ಮತ್ತು ಬೊದಗೂರು ವೆಂಕಟಸ್ವಾಮಿರೆಡ್ಡಿಯನ್ನು ಸನ್ಮಾಸಲಾಯಿತು. ನಂತರ ಶ್ರವಣ ದೋಷವುಳ್ಳಂತ 10 ಜನರಿಗೆ ಶ್ರವಣ ಸಾಧನ ಉಪಯೋಗದ ಉಪಕರಣಗಳನ್ನು ಅಳವಡಿಸಲಾಯಿತು.

ಕಾರ್ಯಕ್ರಮದಲ್ಲಿ ತಲಕಾಯಲ ಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶ್ವಥ್ ನಾರಾಯಣ್, ಈ ತಿಮ್ಮಸಂದ್ರ ನರಸಿಂಹಪ್ಪ, ಜಂಗಮಕೋಟೆ ಗ್ರಾ. ಪಂ. ಮಾಜಿ ಅಧ್ಯಕ್ಷ ಮುನಿರಾಜು ಹಾಲಿ ಸದಸ್ಯ ನರಸಿಂಹಪ್ಪ, ವಿಶ್ವನಾಥ್, ನಟರಾಜು ಮಳಮಾಚನಹಳ್ಳಿ ಬೈರೇಗೌಡ, ಅಪ್ಸರ್, ಜಮೀರ್ ಪಾಷ,ಬಾಬು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here