ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ..

0
207

ಚಿಕ್ಕಬಳ್ಳಾಪುರ/ಬಾಗೇಪಲ್ಲಿ: ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ ದಿಂದ 10 ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಬಾಗೇಪಲ್ಲಿ ಪಟ್ಟಣದ ದ್ವಾರಕ ಪಾರ್ಟಿ ಹಾಲ್ ನಲ್ಲಿ ಏರ್ಪಡಿಸಿದ್ದರು ಈ ಕಾರ್ಯಕ್ರಮವನ್ನು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟನೆ ಮಾಡಿದರು. ಜಿಲ್ಲ ಪಂಚಾಯತಿ ಬೂರಗಮಡುಗು ನರಸಿಂಹಪ್ಪ ಮಾತನಾಡಿ ನಮ್ಮ ನಾಯಕ ಜನಾಂಗ ಮುಂದುವರಿಯಬೇದರೆ ಶಿಕ್ಷಣ ಪಡೆಯಬೇಕು ಶಿಕ್ಷಣ ವಿಲ್ಲದೆ ನಾವು ಉದ್ದಾರ ಸಾಧ್ಯವಿಲ್ಲ ಅದ್ದರಿಂದ ಪೋಷಕ ರು ತಮ್ಮ ಮಕ್ಕಳನ್ನು ಉತ್ತಮವಾಗಿ ಓದಿಸಿ ಜ್ಞಾನ ವಂತರನ್ನಾಗಿ ಮಾಡಬೇಕು ಎಂದರು ಅಲ್ಲದೆ ಬಾಗೇಪಲ್ಲಿ ಶಾಸಕರು ನಾಯಕ ಸಮುದಾಯದ ಭವನಕ್ಕೆ 1.5. ಕೋಟಿ ಮತ್ತು ಸುಮಾರು 50 ಸಮುದಾಯದ ಭವನಗಳನ್ನು ನೀಡಿದ್ದಾರೆ ಅದ್ದರಿಂದ ಇಂತಹ ಶಾಸಕರು ನಮ್ಮಗೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುಮಾರು 200 ವಿಧ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ನರೇಂದ್ರ ಬಾಬು, ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಬಿ.ವಿ.ಮಂಜುನಾಥ್, ಬಿ.ಇ.ಓ.ವೆಂಕಟರಮಣಪ್ಪ, ಬಿ.ಎನ್. ನಾಗರಾಜು, ಹೆಚ್ ವೇಣುಗೋಪಾಲ್, ನಾಯಕ ಸಮುದಾಯದ ಮುಂಖಡರು ಹಾಜರಿದ್ದರು.

LEAVE A REPLY

Please enter your comment!
Please enter your name here