ಪ್ರತಿ ಒಬ್ಬರಲ್ಲಿ ಒಂದು ಪ್ರತಿಭೆ ಇರುತ್ತದೆ..

0
131

ಕಲಬುರ್ಗಿ/ಅಫಜಲಪೂರ:ತಾಲ್ಲೂಕಿನ ಕರಜಗಿ ವಲಯ ಮಟ್ಟದ ಕ್ರೀಡಾಕೂಟ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭಿಮಾಶಂಕರ ಹೊನ್ನಕೆರಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕರಜಗಿ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಿದ್ದರೆ ಸಾಲದು. ಪ್ರತಿ ಒಂದು ವಿದ್ಯಾರ್ಥಿಯಲ್ಲಿ ಒಂದು ಪ್ರತಿಭೆ ಇರುತ್ತದೆ ಅದನ್ನು ಗುರುತಿಸಲು ಇಂದೋಂದು ವೇದಿಕೆ ಇವರ ಸದುಪಯೋಗ ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ ಕರಜಗಿ ವಲಯ ಮಟ್ಟದ ಕ್ರೀಡಾಕೂಟ ರಾಜ್ಯ ಮಟ್ಟದಕ್ಕೆ ಆಯ್ಕೆ ಆಗುತ್ತದೆ ಎಂಬ ಭರವಸೆ ಇದೆ ಹಾಗೂ ಮಕ್ಕಳು ಉತ್ಸಾಹದಿಂದ ಆಟ ಆಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನಾಗಪ್ಪಾ ಉಟಗಿ ಅವರು ಎಲ್ಲಾ ಶಾಲೆಯ ಮಕ್ಕಳು ನಮ್ಮ ಮಕ್ಕಳು ಇದ್ದಂತೆ ಎಂದು ಭಾವಿಸಿ ಸರಿಯಾದ ಪ್ರತಿಭೆಗೆ ತಕ್ಕ ತಿರ್ಪೂ ನೀಡಬೇಕು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಣ್ಣ ಹೋನ್ನರು. ಉಪಾಧ್ಯಕ್ಷ ಅಬ್ದುಲಗಪೂರ ಶೇಖ. ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಜಮಾದಾರ. ಗ್ರಾಮ ಪಂಚಾಯಿತಿ ಸದಸ್ಯರಾದ ವಿಠೋಬಾ ಪೂಜಾರಿ. ಮಲ್ಲಪ್ಪ ಕಿಣ್ಣಗಿ. ವಿಜು ಮೇತ್ರಿ. ವಿರಣ್ಣಾ ಪಡಶೇಟ್ಟಿ. ಸುರೇಶ್ ಬಡಿಗೇರ. ಪ್ರಕಾಶ್ ಚಾಂದಕೊಟೆ. ಶಿವಪುತ್ರ ಬಾಕೆ. ನಾಗೇಶ್ ಗಂಗನಳ್ಳಿ.ಅಂಬಣ್ಣಾ ಕುದುರಿ.ಪಂಡಿತರಾವ್ ಸೊಲೇಕರ. ಶಂಕರಲಿಂಗ ಬಳ್ಳೊಳಿ. ಸೈಪನಸಾಬ ಬಿಂಗೋಳ್ಳಿ. ಸೇರಿದಂತೆ ಶಾಲಾ ಕ್ರೀಡಾಪಟುಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here