ಪ್ರಥಮ ಪ್ರಜೆಯನ್ನು ಕನ್ನಡ ವಿವಿ ಬೆಳ್ಳಿಹಬ್ಬದಲ್ಲಿ ಕಡೆಗಣಿಸಲಾಗಿದೆ..?

0
337

ಬಳ್ಳಾರಿ /ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣದ ಪ್ರಥಮ ಪ್ರಜೆಯನ್ನು ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬದಲ್ಲಿ ಕಡೆಗಣಿಸಲಾಗಿದೆ ಎಂದು ಪಟ್ಟಣದ ವಿವಿಧ ಸಂಘಟನೆಗಳು ವಿಷಾದ ವ್ಯಕ್ತ ಪಡಿಸಿದ್ದಾರೆ. ಮಂಗಳವಾರ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 25ನೇ ಬೆಳ್ಳೆ ಹಬ್ಬಕ್ಕೆ ಊರಿನ ಪ್ರಥಮ ಪ್ರಜೆಯನ್ನು ವೇದಿಕೆಗೆ ಕರೆಯದೆ ಅವಮಾನ ಮಾಡಲಾಗಿದೆ ಎಂದು ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷ ಅಬ್ದುಲ್‍ಜಂತೆ ಸ್ಥಳೀಯ ಸುದ್ದಿಗಾರರೆದೆರು ಬೇಸರ ವ್ಯಕ್ತ ಪಡಿಸಿದರು. ಕಾರ್ಯಕ್ರಮಕ್ಕೆ ಆಹ್ವಾನವಿದ್ದರು ಪಾಸ್‍ಗಳು ಇಲ್ಲದೆ ಅಧ್ಯಕ್ಷರನ್ನು ಒಳಗಡೆ ಬಿಡಲು ಕ.ವಿ.ವಿ ಸಿಬ್ಬಂದಿ ಮತ್ತು ಪೋಲಿಸರು ನಿರಾಕರಿಸಿದರು ಎಂದರು. ಸ್ಥಳೀಯವಾಗಿ ಬೃಹತ್ ಮಟ್ಟದ ಸರ್ಕಾರಿ ಕಾರ್ಯಕ್ರಮಕ್ಕೆ ಊರಿನ ಪ್ರಥಮ ಪ್ರಜೆಯನ್ನು ಕರೆದು ಗೌರವಿಸಿ ಬೇಕಾದವರೇ ಸ್ಥಳೀಯರನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here