ಪ್ರಮುಖ ಕಾರ್ಯಕರ್ತರ ಸಭೆ 

0
120

ಸಿದ್ದರಾಮಯ್ಯನ ಸರ್ಕಾರ ಕಿತ್ತೊಗೆಯಲು ಪಣತೊಡಿ- ಅನುರಾಗಸಿಂಗ್

ರಾಯಚೂರು:ವಿಶ್ವಕ್ಕೆ ಐಟಿಬಿಟಿಯನ್ನು ಪರಿಚಯಿಸುವ ರಾಜ್ಯದಲ್ಲಿ ಆಡಳಿತದಲ್ಲಿರುವ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲು ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯಕರ್ತರು ಪಣ ತೊಡಬೇಕೆಂದು ಹಿಮಾಚಲ ಪ್ರದೇಶದ ಸಂಸದ ಅನುರಾಗಸಿಂಗ್ ಠಾಕೂರ್ ಕರೆ ನೀಡಿದರು.

ನಗರದ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ವಿಶ್ವ ಮಟ್ಟದಲ್ಲಿ ಐಟಿಬಿಟಿಯನ್ನು ರಫ್ತು ಮಾಡುವ ರಾಜ್ಯವನ್ನಾಗಿ ಗುರುತಿಸುತ್ತಿದ್ದು, ಆದರೆ ಇಲ್ಲಿ ಆಡಳಿತದಲ್ಲಿರುವ ಸಿದ್ದರಾಮಯ್ಯರ ಸರ್ಕಾರದಲ್ಲಿ ಆಗಲಾರದ ಎಲ್ಲಾ ಕಾರ್ಯವನ್ನು ಮಾಡಿಕೊಳ್ಳಬಹುದಾಗಿದ್ದು ರಾಜ್ಯಕ್ಕೆ ವಿದ್ಯುತ್ ನೀಡುವ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯುತ್ ಶಾಕ್ ನೀಡುವ ನಿಟ್ಟಿನಲ್ಲಿ ಕಾರ್ಯಕರ್ತರು ತಳಮಟ್ಟದಿಂದ ಕಾರ್ಯನಿರ್ವಹಿಸಬೇಕು. ಕಾರ್ಯಕರ್ತರ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವ ಸಮಯ ಎದುರಾಗಿದ್ದು ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಬದಲಾವಣೆ ಮಾಡುವ ಮೂಲಕ ಪ್ರತಿಕಾರ ತೀರಿಸಿಕೊಳ್ಳಬೇಕು, ರಾಜ್ಯ ಸರ್ಕಾರದ ಸಚಿವರುಗಳು ಭ್ರಷ್ಠಾಚಾರ, ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿದ್ದು ಈ ಸರ್ಕಾರದ ಸಾಧನೆಯಾಗಿದ್ದು, ರಾಜ್ಯದ ಯುವಕರಿಗೆ ಯಾವುದೇ ರೀತಿಯ ಉದ್ಯೋಗ ಸೃಷ್ಠಿಸುವಲ್ಲಿ ವಿಫಲವಾಗಿದೆ.

ಲೋಕಸಭೆ ಅಧೀವೇಶನದಲ್ಲಿ ಕಾಂಗ್ರೆಸ್ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಲೋಕಸಭೆಯಲ್ಲಿ ವಿಪಕ್ಷ ಸ್ಥಾನವನ್ನು ಪಡೆಯದ ಕಾಂಗ್ರೆಸ್ ಮುಂಬರುವ ರಾಜ್ಯ ವಿಧಾನಸಭೆಯಲ್ಲಿ ಸೋಲುವ ಭೀತಿಯಿಂದ ಚರ್ಚೆಗೆ ಅವಕಾಶ ಕಲ್ಪಿಸುತ್ತಿಲ್ಲ, ಕಾಂಗ್ರೆಸ್ ಸಂಸದರ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದಲ್ಲಿ ಸೋಲಿನ ಭೀತಿ ಕಾಡುತ್ತಿದ್ದು ಕಾಂಗ್ರೆಸ್ ಲೋಕಸಭೆಯಲ್ಲಿ ಚರ್ಚೆ ನಡೆಸಿದ ಸಮಯದಲ್ಲಿ ಒಂದೊಂದು ರಾಜ್ಯವನ್ನು ಕಳೆದುಕೊಂಡಿದ್ದು, ಬಿಜೆಪಿ ಯಾವುದೇ ವಿಷಯಗಳ ಚರ್ಚೆಗೆ ಸಿದ್ಧವಿದ್ದು, ಕಾಂಗ್ರೆಸ್ ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡದಿದ್ದರೇನು ನಾವು ರಾಜ್ಯದ ಜನತೆಯ ಮುಂದೆ ಚರ್ಚೆಸುತ್ತೇವೆ.

ಕಳೆದ 5 ವರ್ಷಗಳಿಂದ ಮಲಗಿದ್ದ ಸಿದ್ದರಾಮಯ್ಯ ಸರ್ಕಾರ ನಿನ್ನೆ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಬಗ್ಗೆ ಮಾತನಾಡುತ್ತಿದೆ. ಕಾಂಗ್ರೆಸ್‍ನ್ನು ಮನೆಗೆ ಕಳುಹಿಸಲು 2/3 ಅಂಶಗಳ ಬಹುಮತದ ಬಿಜೆಪಿ ಸರ್ಕಾರ ರಚನೆಗೆ ಕಾರ್ಯಕರ್ತರು ಪಣತೊಡಬೇಕೆಂದು ಕರೆ ನೀಡಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೂತ್ ಮಟ್ಟದ ಕಾರ್ಯ ಅತ್ಯಂತ ಪ್ರಮುಖವಾಗಿದ್ದು, ಬೂತ್ ಮಟ್ಟದ ಸಂಘಟನೆ ಸಕ್ರಿಯತೆ ಬಹಳ ಪ್ರಮುಖದ್ದಾಗಿದೆ ಎಂದರು.

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಎನ್.ಶಂಕ್ರಪ್ಪ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬೂತ್ ಮಟ್ಟದ ಸಂಘಟನೆ ಅತ್ಯವಶ್ಯಕವಾಗಿದ್ದು, ಉತ್ತರ ಪ್ರದೇಶ ಮಾಧರಿಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಸಕ್ತಿಯವಾಗಿ ಭಾಗವಹಿಸಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ, ಯು.ದೊಡ್ಡಮಲ್ಲೇಶಪ್ಪ, ರಾಜೇಶ್ ಜೈನ್, ಅಶೋಕ ಗಸ್ತಿ, ರಾಜಕುಮಾರ, ರಾಘವೇಂದ್ರ, ಎನ್.ಶ್ರೀನಿವಾಸರೆಡ್ಡಿ, ಅಮರನಾಥ್ ಪಾಟೀಲ್, ಶಿವರಾಜ್ ಪಾಟೀಲ್, ತ್ರಿವಿಕ್ರಮ ಜೋಷಿ, ಬಸನಗೌಡ ಬ್ಯಾಗವಾಟ್, ಅನಿಲ್ ನಾಯ್ಡು, ಪ್ರಮೋದ, ಕೆ.ಎಂ.ಪಾಟೀಲ್, ಪ್ರಾಣೆಶ ದೇಶಪಾಂಡೆ, ಅಚ್ಯುತ್‍ರೆಡ್ಡಿ, ರಮಾನಂದ, ಶಿವಕುಮಾರ, ಬಂಡೇಶ ಮಲ್ಕಂದಿನ್ನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುತ್ತಣ್ಣಹೆಳವರ್ ರಾಯಚೂರು

LEAVE A REPLY

Please enter your comment!
Please enter your name here