ಪ್ರವಾಸಿಗರ ತಾಣವಾಗಿರುವ ಗುರಮ್ಮ ಕೆರೆ

0
326

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಲರೆಡ್ಡಿ ಪಳ್ಳಿ ಗ್ರಾಮದ ಗುರಮ್ಮನ ಕೆರೆ ತುಂಬಿ ಹರಿಯುತ್ತಿದ್ದು, ತಾಲ್ಲೂಕಿನ ಜನರನ್ನು ಆಕರ್ಷಿಸುವಂತಹ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.ಸುಮಾರು ಮೂರು ದಿನಗಳಿಂದ ಈ ಕೆರೆಯು ತುಂಬಿ ಹರಿಯುತ್ತಿದ್ದು ಈ ಭಾಗದ ರೈತರಿಗೆ ಸಂತಸವನ್ನು ತಂದಿದೆ.ಅದೇ ರೀತಿಯಾಗಿ ಅಂದ್ರೆ ಪೆನು ಮಳೆ ಕೆರೆಯು ತುಂಬಿ ಹರಿಯುತ್ತಿದ್ದು. ಈ ಭಾಗದಲ್ಲಿ ಸುಮಾರು ಹತ್ತು ವರ್ಷಗಳ ನಂತರ ಈ ರೀತಿಯ ಮಳೆಯನ್ನು ಕಂಡ ರೈತರು ಸಂತಸವನ್ನು ವ್ಯಕ್ತಪಡಿಸಿದ್ದಾರೆ ಅಲ್ಲದೆ ಈ ಭಾಗದಲ್ಲಿ ಕೃಷಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ರೈತರು ಸುದ್ದಿಗಾರರ ಜೊತೆ ಹರ್ಷವನ್ನು ವ್ಯಕ್ತಪಡಿಸಿದರು . ಸುತ್ತಮುತ್ತಲಿನ ಗ್ರಾಮಗಳಿಂದ ತಾಲ್ಲೂಕಿನಿಂದ ಜನರು ತಾಮುಂದು ನಾಮುಂದು ಎಂಬಂತೆ ಈ ಕೆರೆಯನ್ನು ವೀಕ್ಷಣೆ ಮಾಡಲು ಬರುತ್ತಿದ್ದರೆಂದು ರೈತರು ತಿಳಿಸಿದರು .

LEAVE A REPLY

Please enter your comment!
Please enter your name here