ಪ್ರವಾಹದಲ್ಲಿ ಸಿಲುಕಿ ಮರವೇರಿ ಕುಳಿತಿದ್ದ ರೈತ ಸುರಕ್ಷೆ

0
178

ಬಳ್ಳಾರಿ /ಸಿಂಧುವಾಳ:ಗಣಿನಾಡು ಬಳ್ಳಾರಿಯಲ್ಲಿ ಸುರಿದ ಮಳೆ ಅವಾಂತರದಿಂದ ಪ್ರವಾಹದಲ್ಲಿ ಸಿಲುಕಿ ಒದ್ದಾಡಿದ ರೈತ ಸದ್ಯ ಸುರಕ್ಷಿತವಾಗಿದ್ದಾನೆ.

ಬಳ್ಳಾರಿ ತಾಲೂಕಿನ ಸಿಂಧುವಾಳ ಗ್ರಾಮದ ರೈತ ಶ್ರೀನಿವಾಸ್ ಸಂಜೆ ಹೊಲಕ್ಕೆ ಹೋದ ಸಮಯದಲ್ಲಿ ಪ್ರವಾಹ ಬಂದ ಕಾರಣ ನೀರಿನಲ್ಲಿ ಕೊಚ್ಚಿ ಹೋಗುತ್ತೇನೆ ಎಂಬ ಭಯದಿಂದ ಮರವೇರಿ ಕುಳಿತಿದ್ದ. ಮರವೇರಿ ಕುಳಿತ ವಿಚಾರ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಸುರೇಶ್ ಅವರಿಗೆ ಗ್ರಾಮಸ್ಥರು ತಲುಪಿಸಿದ್ದಾರೆ. ವಿಷಯ ತಿಳಿದ ಪಿಎಸ್ಐ ತಮ್ಮ ಹಿರಿಯ ಅಧಿಕಾರಿಗಳಿಗೆ ವಿಷಯ ತಲುಪಿಸಿ, ಅಗ್ನಿಶಾಮಕ ದಳದ ಸಿಬ್ಬಂದಿಗೆ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಕರೆಸಿಕೊಂಡು ಎಲೆಕ್ಟ್ರಾನಿಕ್ ಬೋಟ್ ಮೂಲಕ ರಕ್ಷಣೆ ಮಾಡಲು ಎಲ್ಲ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಪ್ರವಾಹ ಪ್ರಮಾಣ ಕಡಿಮೆಯಾದ ಕಾರಣ, ರೈತನಿಗೆ ಮರದ ಮೇಲಿಂದ ಇಳಿಯಲು ಧೈರ್ಯ ಮಾಡಿ ಕೊನೆಗೆ ರಾತ್ರಿ ಒಂದು ಘಂಟಿಗೆ ಇಳಿದು ಬೆಣಕಲ್ಲು ಗ್ರಾಮದ ಮೂಲಕ ಸಿಂಧುವಾಳ ಗ್ರಾಮಕ್ಕೆ ಬಂದು, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಹಸ್ತಲಾಘವ ನೀಡಿದ್ದಾನೆ. ಅಲ್ಲದೇ ನಾನು ಸುರಕ್ಷಿತವಾಗಿ ಇದ್ದೇನೆ ಎಲ್ಲರಿಗೂ ಧನ್ಯವಾದಗಳೆಂದು ಸಹ ಹೇಳಿದ ರೈತ. ಬಳ್ಳಾರಿ ಡಿವೈಎಸ್ಪಿ ಸುರೇಶ್, ತಹಸೀಲ್ದಾರ್, ಮೋಕಾ ಪಿಎಸ್ಐ ಸುರೇಶ್ ಅಗ್ನಿಶಾಮಕ ದಳದ ವಲಯ ಅಧಿಕಾರಿ ರವಿಶಂಕರ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಂಧುವಾಳ ಗ್ರಾಮದ ಜನರು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಕಾರ್ಯಚರಣೆಗೆ ತರಿಸಿದ್ದ ಬೋಟ್ ಘಟನಾ ಸ್ಥಳಕ್ಕೆ ತಲುಪುವಷ್ಟರಲ್ಲಿಯೇ ಪ್ರಕರಣ ಸುಖ್ಯಾಂತ ಕಂಡಿದೆ.

LEAVE A REPLY

Please enter your comment!
Please enter your name here