ಪ್ರಾಣ ಹೋಗೋ ಸಂದರ್ಭದಲ್ಲೂ ವ್ಯಾಪ್ತಿ ನೋಡೋ ೧೦೮ ಸಿಬ್ಬಂದಿ

0
136

ತುಮಕೂರು/ಕೊರಟಗೆರೆ: ೧೦೮ ಅಂಬ್ಯುಲೆನ್ಸ್ ನ ಸೇವೆಯ ನಿಗದಿತ ವ್ಯಾಪ್ತಿಯಿಂದಾಗಿ ಹಲವಾರು ರೋಗಿಗಳ ಜೀವಕ್ಕೆ ಸಂಚಕಾರ ಉಂಟಾಗುತ್ತಿದೆ.
ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಹನುಮಂತರಾಜು ಹಾಗೂ ಸಿದ್ದಪ್ಪ ಎಂಬಿಬ್ಬರು ರೋಗಿಗಳ ಸ್ಥಿತಿ ಗಂಭೀರವಾದ ಕಾರಣ ಮಧುಗಿರಿಯ ತಾಲೂಕಾ ಆಸ್ಪತ್ರೆಯಿಂದ ತುಮಕೂರು ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ಕೊರಟಗೆರೆಯ ಜಟ್ಟಿ ಅಗ್ರಹಾರ ಬಳಿ ಬರುತಿದ್ದಂತೆ ೧೦೮ ವಾಹನ ಚಾಲಕ ಸಿಬ್ಬಂದಿ ತಮ್ಮ ವ್ಯಾಪ್ತಿ ಮುಗಿದಿದೆ ಎಂದು ಹೇಳಿ ಅಲ್ಲಿಗೆ ನಿಲ್ಲಿಸಿದ್ದಾರೆ. ರೋಗಿಗಳ ಸಿಬ್ಬಂದಿಗಳು ಕಂಗಾಲಾಗಿ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆಗ ೧೦೮ ಸಿಬ್ಬಂದಿ ಗಳು ತೋವಿನಕೆರೆಯಿಂದ ಇನ್ನೊಂದು ೧೦೮ ಅಂಬ್ಯುಲೆನ್ಸ ಕರೆಯಿಸಿ ರೋಗಿಗಳನ್ನು ಶಿಪ್ಟ್ ಮಾಡಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಣ ಹೋಗೋ ಸಂದರ್ಭದಲ್ಲೂ ೧೦೮ ಸಿಬ್ಬಂದಿಗಳು ತಮ್ಮ ವ್ಯಾಪ್ತಿ ನೋಡುತ್ತಾ ಕುಂತರೇ ರೋಗಿಗಳ ಪಾಡೇನೂ ಎಂಬುದು ಸಾರ್ವಜನಿಕರ ಪ್ರಶ್ನೆ. ಅಲ್ಲದೆ ೧೦೮ ಅಂಬ್ಯುಲೆನ್ಸಗಳ ಈ ವ್ಯಾಪ್ತಿ ನಿಯಮ ಬದಲಾಗಬೇಕು ಅನ್ನೋದು ನಾಗರಿಕರ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here