ಪ್ರಾದೇಶಿಕ ಪಕ್ಷದ ದಿಂದ ಮಾತ್ರ ಬದಲಾವಣೆ ಸಾಧ್ಯ

0
233

ಬಳ್ಳಾರಿ :ಕುಮಾರ ಸ್ವಾಮಿ ಕಾರ್ಯಕ್ರಮದ ನಿಮಿತ್ತ ಬಳ್ಳಾರಿಗೆ ಮಧುಬಂಗಾರಪ್ಪ ಆಗಮನ- ೨೦೧೮ಚುನಾವಣೆ ಸಿದ್ದತೆ ಮಾಡಿಕೊಳ್ಳಲಾಗುತ್ತದೆ- ರಾಜ್ಯದಲ್ಲಿ ಬದಲಾಣೆ ಕಾಣುತ್ತಿದೆ-ಪ್ರಾದೇಶಿಕ ಪಕ್ಷದ ಕೈಯಲ್ಲಿ ಅಧಿಕಾರವಿದ್ದರೇ ಮಾತ್ರ ಬದಲಾವಣೆ ಸಾಧ್ಯ-ಕಾವೇರಿ, ಮಹಾದಾಯಿ ಸಮಸ್ಯೆ ಇತ್ಯಾರ್ಥವಾಗಲು ಜೆಡಿಎಸ್ ಗೆ ಬೆಂಬಲಿಸಿ-ಬಳ್ಳಾರಿಯಲ್ಲಿ ಮಧು ಹೇಳಿಕೆ

ನಿರ್ಮಲ್‌ಭಾರತ್ ಯೋಜನೆಯನ್ನು ಸ್ವಚ್ಛ ಭಾರತ ಯೋಜನೆಯಂದು ಮಾಡಿದ್ದಾರೆ ಅಂತ ಹೇಳಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಬಳ್ಳಾರಿಯಲ್ಲಿ ಹೇಳಿದ್ದಾರೆ.
ಕರ್ನಾಟಕಕ್ಕೆ ಕುಮಾರಣ್ಣ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಳ್ಳಾರಿಗೆ ಆಗಮಿಸಿದ ಅವರು, ರಾಜ್ಯಾದ್ಯಂತ ಸಭೆ ಮಾಡಿ ಪಕ್ಷದ ಸಂಘಟನೆ ಮಾಡ ಲಾಗುತ್ತಿದೆ. ತಪ್ಪುಗಳು ಎಲ್ಲ ಪಕ್ಷದಲ್ಲಿ ‌ನಡೆದಿವೆ ಎಂದ ಅವರು ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಹಳೇ ಜನತಾ ಪರಿವಾರದಂತೆ ಪಕ್ಷವನ್ನು ಕಟ್ಟುತ್ತೆವೆ. ಸರ್ಕಾರ ಅಧಿಕಾರಕ್ಕೆ ಬಂದ್ರೆ ೫ಲಕ್ಷ ಹುದ್ದೇ ಸೃಷ್ಟಿ ಮಾಡುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು. ವಿಶ್ವನಾಥ್ ಅವರ ಜೊತೆ ಒಂದುವರೆ ವರ್ಷದಿಂದ ಸಂಪರ್ಕದಲ್ಲಿದ್ದೆ. ೪೦ ವರ್ಷದಲ್ಲಿ ಕಾಂಗ್ರೆಸ್ ನಲ್ಲಿದ್ದ ವರನ್ನು ಜೆಡಿಎಸ್ ಕರೆತಂದಿ ದ್ದೇವೆ. ಹಾವೇರಿ ಹುಬ್ಬಳ್ಳಿ ಮಧ್ಯೆ ಶೀಘ್ರದಲ್ಲೇ ಯುವ ಸಮಾವೇಶ ನಡೆಯಲಿದೆ. ಜೆಡಿಯು, ಜನತಾ ಪರಿವಾರದವರನ್ನು ಒಂದುಗೂಡಿಸುತ್ತೇವೆ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದರು. ‌ಹಾಗೆಯೇ ಲಿಂಗಾಯತ ವೀರಶೈವ ವಿಚಾರ ಕುರಿತು ಮಾತನಾಡಿ, ಜಾತಿಯ ಬಗ್ಗೆ ನಾನು ಮಾತನಾಡಲ್ಲ.. ನಮ್ಮ ಸರ್ಕಾರ ಜಾತ್ಯಾತೀತ ವಾಗಿರಲಿದೆ. ಶಾಸಕ ಎಂ.ಪಿ. ರವೀಂದ್ರ ‌ಪಕ್ಷ ಬರುವ ವಿಚಾರ ಗೊತ್ತಿಲ್ಲ. ಅವರು ಸೇರಿದಂತೆ ಯಾರೆ ಬಂದ್ರು ಸ್ವಾಗತ..
ಯಾವುದೇ ಒಂದು ಸರ್ಕಾರಕ್ಕೆ ಎಲ್ಲಾ ಜನಾಂಗದವರು ಮತ ಹಾಕಿರುತ್ತಾರೆ.. ಹೀಗಾಗಿ ನಾನು ಜಾತಿ ಬಗ್ಗೆ ಮಾತನಾಡಲ್ಲ.. ಜಾತಿ ಬಗ್ಗೆ ಮಾತನಾಡೊದು ಬೇಡ.. ಚುನಾವಣೆಯಲ್ಲಿ ಯುವಕರಿಗೆ‌ ಹೆಚ್ಚಿನ ಪ್ರಮುಖ್ಯತೆ‌ ನೀಡಲಾಗುತ್ತದೆ ಎಂದ್ರು.
ಪಕ್ಷದಲ್ಲಿದ್ದ ನಲವತ್ತು ಶಾಸಕರು ಓಡಿ ಹೋಗಿದ್ದಾರೆ.. ಅವರ ಬಗ್ಗೆ ಮಾತನಾಡಲ್ಲ.. ಕುಮಾರ ಸ್ವಾಮಿ ‌ಉ.ಕ. ದಲ್ಲಿ‌ ನಿಲ್ಲವುದು ಅವರಿಗೆ ಬಿಟ್ಟ ವಿಚಾರ.. ಬಂಗಾರಪ್ಪ ಅವರ ಆಸೆಯೂ ಕುಮಾರ ಸ್ವಾಮಿ ಮುಖ್ಯಮಂತ್ರಿ ಮಾಡಬೇಕು ಎನ್ನುವುದಾಗಿತ್ತು ಅಂತ ಹೇಳಿದ್ರು.

LEAVE A REPLY

Please enter your comment!
Please enter your name here