ಪ್ರಾಧಿಕಾರಕ್ಕೆ ಕೋಟಿ ಕೋಟಿ ಹಣ

0
315

ಬಳ್ಳಾರಿ /ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಆಗಮಿಸುವ ಪ್ರವಾಸಿರ ಸಂಖ್ಯೆ-ಗಣನೀಯವಾದೆ ಎರಿಕೆ. ಹಂಪಿ ಪ್ರಾಧಿಕಾರಕ್ಕೆ ಹರಿದುಬಂತು ಕೋಟಿ ಕೋಟಿ ಹಣ. ಹಂಪಿಯ ಮಹಿಮೆಯೆ ಹಾಗೆ, ಎಂತವರನ್ನು ತನ್ನತ್ತ ಆಕರ್ಷಿಸುತ್ತೆ. ಕಳೆದ ಮೂರುವರ್ಷಗಳಿಂದ ರಾಜ್ಯಕ್ಕೆ ಬರಗಾಲ ಅಂಟಿದ್ದರು ಹಂಪಿಗೆ ಬರೊ ಪ್ರವಾಸಿಗರಿಗೇನು ಬರವಿಲ್ಲ.ವಿಜಯನಗರ ಸಾಮ್ರಾಜ್ಯದ ರಾಜರು ರಸ್ತೆಯಲ್ಲಿ ಮುತ್ತು ರತ್ನಗಳನ್ನ ಮಾರಾಟಮಾಡಿದ್ದರು ಎನ್ನುವುದು ಇದಕ್ಕೆ ಇರಬೇಕು. ಅಷ್ಟೆ ಅಲ್ಲ ಪುರಂದರು, ದಾಸರು ನಡೆದಾಡಿದ ಮಣ್ಣಿನ ಮಹಿಮೆಯೆ ಇದಕ್ಕೆ ಸಾಕ್ಷಿಯಿರಬೇಕು. ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ದೇಶಿಗರು ಸೇರಿದಂತೆ ವಿದೇಶಿಗರು ಹೆಚ್ಚು. 2016-17ರ ಅಂಕಿ ಅಂಶಗಳ ಪ್ರಕಾರ ಈ ವರ್ಷದಲ್ಲಿ ಒಟ್ಟು 6ಲಕ್ಷಪ್ರವಾಸಿರು ಹಂಪಿಗೆ ಭೇಟಿ ನೀಡಿದ್ದಾರೆ.ಇದರಲ್ಲಿ 50ಸಾವಿರ ವಿದೇಶಿಗರು ಹಂಪಿ ಸೋಬಗನ್ನ ವೀಕ್ಷಿಸಿ ಸವಿದಿದ್ದಾರೆ.‌ಹೀಗಾಗಿ ಹಂಪಿಪ್ರಾಧಿಕಾರಕ್ಕೆ 4 ಕೋಟಿಗು ಹೆಚ್ಚು ಹಣ ಸಂದಾಯವಾಗಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈವರ್ಷ ಹೆಚ್ಚು ಪ್ರವಾಸಿಗರು ಭೇಟಿನೀಡಿದ್ದಾರೆ ಆದರೆ ಕಳೆದ ವರ್ಷ 3 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. 2 ಕೋಟಿ 30 ಲಕ್ಷ ಆಧಾಯ ಸಂದಾಯವಾಗಿತ್ತು.ಈ ಬಾರಿ ಹಂಪಿಯ ಸ್ಮಾರಕ ವೀಕ್ಷಣೆಗೆ ಟಿಕೇಟ್ ಧರದಲ್ಲಿ ಪರಿಷ್ಕರಣೆ ಮಾಡಿರುವ ಸರ್ಕಾರ ಭಾರತಿಯರಿಗೆ 30 ರೂಪಾಯಿ, ವಿದೇಶಿಗರಿಗೆ 500 ರೂಪಾಯಿಗಳ ಟಿಕೇಟ್ ಧರ ಹೆಚ್ಚಿಸಿರುವುದು ಆಧಾಯ ಎರಡುಪಟ್ಟು ಹೆಚ್ಚಾಗಲು ಕಾರಣ ಆಗಿರಬಹುದು.ಮತ್ತು ಕಳೆದ ಡಿಸೆಂಬರ್, ಜನವರಿ, ನವೆಂಬರ್ ತಿಂಗಳುಗಳಲ್ಲೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here