ಪ್ರಾರ್ಥನಾಯಾತ್ರೆ ಮೂಲಕ ಪ್ರತಿಭಟನೆ…

0
92

ಬೆಂಗಳೂರು /ಮಹದೇವಪುರ: ಕೇರಳದ ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಭಜರಂಗದಳ ಮುಖ್ಯಸ್ಥ ಸೂರ್ಯ ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಕಾಡುಗುಡಿ ವಾರ್ಡಿನ ಪ್ರಮುಖ ಬೀದಿಗಳಲ್ಲಿ ಪ್ರಾರ್ಥನಾ ಯಾತ್ರೆ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನದ ವಿಚಾರವಾಗಿ ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲೂ ವ್ಯಾಪಕ ಪ್ರಮಾಣದಲ್ಲಿ ಪ್ರತಿಭಟನೆ ನಡೆಯುತ್ತದೆ .
ಹಿಂದೂ ಧಾರ್ಮಿಕದ ಬಗ್ಗೆ ಯಾವುದೇ ಶ್ರದ್ಧೆ ಇಲ್ಲದಂತಹ ವ್ಯಕ್ತಿಗಳು ಹಾಕಿದ ಕೇಸನ್ನು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕೋಟ್ಯಂತರ ಹಿಂದೂ ಧಾರ್ಮಿಕ ಭಕ್ತರ ಭಾವನಕ್ಕೆ ಧಕ್ಕೆ ಆಗಿದೆ ಎಂದರು .
ಇದಕ್ಕೆ ಕೇರಳದಲ್ಲಿರುವ ಕಮ್ಯುನಿಸ್ಟ್ ಸರ್ಕಾರದ ಕುಮ್ಮಕ್ಕು ಸ್ಪಷ್ಟವಾಗಿ ಕಾಣುತ್ತಿದೆ ಅಷ್ಟೇ ಅಲ್ಲದೆ ಕ್ರೈಸ್ತ ಮಿಷನರಿಯ ಕೈವಾಡ ಇದೆ ಎಂದು ಸ್ಪಷ್ಟವಾಗಿದೆ ಎಂದು ಹೇಳಿದರು.
ಇತಿಹಾಸ ನೋಡಿದರೆ ಶಬರಿಮಲೈ ಧಾರ್ಮಿಕ ನಂಬಿಕೆಯನ್ನು ಕೆಡಿಸುವ ಕೆಲಸವನ್ನು ಕ್ರೈಸ್ ಮಿಶನರಿಗಳು ಹತ್ತಾರು ಬಾರಿ ಪ್ರಯತ್ನ ಮಾಡಿವೆ ಎಂದು ಕಿಡಿಕಾಡಿದರು.
ಇಡೀ ಹಿಂದೂ ಸಮಾಜ ಇದನ್ನು ವಿರೋಧ ಮಾಡುತ್ತಿದೆ ಯಾವುದೇ ಕಾರಣಕ್ಕೂ ಇದು ನಿಲ್ಲಿಸುವುದಿಲ್ಲ, ನ್ಯಾಯ ಸಿಗುವವರೆಗೂ ಕೇರಳ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ರಾಜೇಶ್, ಪ್ರಗತಿ ಶಾಲೆಯ ಮುಖ್ಯಸ್ಥ ಸೊಮ ಸಿಂಗ್, ಕಾಡುಗುಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಅಪ್ಪಯ್ಯಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಚನ್ನಸಂದ್ರ ಚಂದ್ರಶೇಖರ್, ಯೋಗೇಶ್, ಪ್ರದೀಪ್ ಸೇರಿದಂತೆ ನೂರಾರು ಹಾಜರಿದ್ದರು. ಬೈಟ್:- ಬಜರಂಗದಳ ಮುಖ್ಯಸ್ಥ ಸೂರ್ಯ ನಾರಾಯಣ.
ಬೈಟ್:- ಸೋಂ ಸಿಂಗ್ ಸ್ಥಳೀಯ ನಿವಾಸಿ.

LEAVE A REPLY

Please enter your comment!
Please enter your name here