ಫಸಲ್ ಭೀಮಾ ಯೋಜನೆ ಹಗಲು ದರೋಡೆ ಯೋಜನೆ – ಹೆಚ್‍ಡಿಕೆ ಆರೋಪ

0
138

ರಾಯಚೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫಸಲಭೀಮಾ ಯೋಜನೆ ಹಗಲು ದರೋಡೆ ಯೋಜನೆಯಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಆರೋಪಿಸಿದರು.
ದೇವದುರ್ಗಲ್ಲಿ ನಡೆಯುವ ರೈತರ ಸಾಲ ಮನ್ನಾ ಬೃಹತ್ ಸಮಾವೇಶಕ್ಕೆ ತೆರಳುವ ಮುನ್ನ ನಗರದ ನಗರೇಶ್ವರ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ 2.50ಸಾ.ಕೋ.ಹಣ ವಿಮಾಕಂಪನಿಗೆ ಸಂದಾಯವಾಗುತ್ತಿದ್ದರು ಕೂಡ ಜವಾಬ್ದಾರಿಯಿಂದ ವರ್ತಿಸದೆ, ಕಾನೂನು ನಿಯಮಗಳನ್ನು ಗಾಳಿಗೆ ತೂರಿ 60-70ಸಾ.ಕೋ.ರೂಹಣ ದುರ್ಬಳಕೆಯಾಗಿದ್ದು ಕಂಪನಿಯಿಂದ ಇರುವ ವ್ಯಕ್ತಿಗಳ ಹೆಸರನ್ನು ಕೇಂದ್ರ ಸರಕಾರ ಬಹಿರಂಗಪಡಿಸಬೇಕೆಂದರು.
ಬಿಜೆಪಿ ಸರಕಾರ 2ಬಾರಿ ರೈತರ ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಿದು ಯಾವಾಗ ಮಾಡಿದ್ದಾರೆ ಎಂದು ಪ್ರಶ್ನಿಸಿದವರು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡುವ ವಿಚಾರದಲ್ಲಿ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರು. ಬಿಎಸ್.ಯಡಿಯುರಪ್ಪನವರದು ರೈತರ ವಿರೋಧಿ ನಿಲುವಾಗಿದೆ ಎಂದು ದೂರಿದರು. ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗಿದ್ದಾಗ 25ಸಾವಿರ ಸಾಲಮನ್ನಾ ಮಾಡುವುದಾಗಿ ಹೇಳಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದಾರೆ ಎಂದು ದೂರಿದರು.
ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ರಾಜ್ಯದ ಜನತೆಯ ಸಮಸ್ಯೆಗೆ ಪರಿಹಾರ ದೊರೆತಿಲ್ಲ, ರಾಜ್ಯದಲ್ಲಿ ರೈತ ಸಮುದಾಯ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಸರಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 3ವರ್ಷ ಬರಗಾಲ ಆವರಿಸಿದ್ದು, ಮಳೆಯ ಪ್ರಮಾಣದ ಕೊರತೆಯಿಂದ 65ಸಾ.ಕೋ.ನಷ್ಠವಾಗಿದೆ. ಕೇಂದ್ರ ಸರಕಾರದಿಂದ ಬರುವ ಹಣ ರಾಜ್ಯ ಸರಕಾರ ವಿತರಿಸುತ್ತಿಲ್ಲ, ಬೆಳೆ ಪರಿಹಾರ ಹೆಸರಿನಲ್ಲಿ ಬೇರೆಯವರ ಖಾತೆಗೆ ವರ್ಗಾವಣೆಯಾಗುತ್ತಿದ್ದು, ರೈತರ ಆರ್ಥಿಕ ಸಂಕಷ್ಟದ ನೆರವಿಗೆ ಬರುತ್ತಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರಕಾರ ಹಣ ನೀಡುತ್ತಿದ್ದು, ರಾಜ್ಯ ಸರಕಾರ ಪರಿಹಾರ ವಿತರಿಸುತ್ತಿಲ್ಲ ಎಂದು ಬಿಜೆಪಿ ಪಕ್ಷದವರು ಆಪಾದನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಗಾಲಕ್ಕೆ ಒಳಗಾದ ಬೇರೆ ಬೇರೆ ರಾಜ್ಯಗಳಿಗೆ ನೇರವು ನೀಡುವ ಕೇಂದ್ರ ಸರಕಾರ ರಾಜ್ಯಕ್ಕೆ ಯಾಕೆ ನಿಡುತ್ತಿಲ್ಲ ಎಂದು ಹೇಳುತ್ತಿದಾರೆ. ಪರಸ್ಪರ ಆರೋಪ ಪ್ರತ್ಯಾರೋಪಗಳ ಮಧ್ಯೆ ರೈತರ ಸಂಕಷ್ಟ ಪರಿಹರಿಸಲು ಸಾಧ್ಯವಿಲ್ಲ. ರಾಜ್ಯ ಸರಕಾರ ರೈತರಿಗೆ ಪರಿಹಾರ ನೀಡುತ್ತಿಲ್ಲ, ಖಜಾನೆಯಿಂದ ಹಣ ಬಿಡುಗಡೆಮಾಡದೆ ಇದ್ದರೆ ರೈತರ ಆತ್ಮಹತ್ಯೆಗಳು ಮುಂದುವರೆಯುತ್ತವೆ. ಮಳೆಯ ಕೊರತೆಯಿಂದ ಬೆಳೆ ನಾಶವಾಗಿದ್ದು, ನಷ್ಠದ ವರದಿಯನ್ನು ತೆಗೆದುಕೊಂಡು ಪರಿಹಾರ ವಿತರಣೆ ಮಾಡಲು ನಿರಾಕರಿಸುತ್ತದ್ದಾರೆ. ರಾಷ್ಟ್ರೀಯ ಪಕ್ಷಗಳು ರೈತರ ವಿರೋಧಿ ನಿಲುವನ್ನು ಹೊಂದಿದ್ದು ತೆರಿಗೆ ಹಣವನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಬಂಡೇಪ್ಪ ಕಾಂಶಾಪುರ ಎಂ.ವಿರುಪಕ್ಷಿ,ಶಿವಶಂಕರ ವಕೀಲ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here