ಫಾರಂ ನೀಡುವಂತೆ ಸದಸ್ಯರ ಒತ್ತಾಯ

0
198

ಬಳ್ಳಾರಿ /ಹೊಸಪೇಟೆ : ಫಾರಂ-ನಂ 3 ಅರ್ಜಿ ಇಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ. ಶಾಲೆಗೆ, ಆಸ್ತಿ ಮಾರಾಟ, ಆಸ್ತಿ ಖರೀದಿ, ಆಶ್ರಯ ಮನೆ, ಹಾಗು ಸಾಲ ಸೌಲಭ್ಯಕ್ಕೆ ತುರ್ತಾಗಿ ಬೇಕಾಗಿದ್ದು, ಕೂಡಲೇ ಮಾನ್ಯ ಪ್ರಭಾರಿ ಪೌರಾಯುಕ್ತರು ಅದಕ್ಕೆ ಅವಕಾಶ ನೀಡಬೇಕು ಎಂದು ಸದಸ್ಯರು ಒಕ್ಕೊರಫಾರಂ ನೀಡುವಂತೆ ಸದಸ್ಯರ ಒತ್ತಾಯನಿಂದ ಆಗ್ರಹಿಸಿದರು.

ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಅಬ್ದುಲ್ ಖದೀರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಒತ್ತಾಯಿಸಿದ ಸದಸ್ಯರು, ಫಾರಂ-ನಂ 3 ಅರ್ಜಿ ಇಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಅದಕ್ಕೆ ಮಾನ್ಯ ಸಹಾಯಕ ಆಯುಕ್ತರು ಅವಕಾಶ ನೀಡಬೇಕು ಎಂದು ಅಧ್ಯಕ್ಷ ಅಬ್ದುಲ್ ಖದೀರ್ ಮನವಿ ಮಾಡಿದಾಗ, ಉಳಿದ ಸದಸ್ಯರು ಅದಕ್ಕೆ ಧ್ವನಿಗೂಡಿಸಿದರು.

ಇದಕ್ಕೆ ಪ್ರಭಾರಿ ಪೌರಾಯುಕ್ತ ಹಾಗು ಸಹಾಯಕಾಯುಕ್ತರಾದ ಪ್ರಶಾಂತಕುಮಾರ್ ಮಿಶ್ರಾ ಪ್ರತಿಕ್ರಿಯಿಸಿ, ತುರ್ತು ಸಂಧರ್ಭಕ್ಕೆ ತಕ್ಕಂತೆ ಆಸ್ತಿ ಮಾರಾಟ, ಖರೀದಿ, ಆಶ್ರಯ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನಿತರ ಅಗತ್ಯಗಳಿಗೆ ತುರ್ತಾಗಿ ಒದಗಿಸಲಾಗುವುದು. ಇನ್ನು 10 ದಿನಗಳಲ್ಲಿ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ನಿರಂತರವಾಗಿ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸದಸ್ಯ ಬಡಾವಲಿ, ಎಂ.ಎಸ್.ರಘು , ನಿಂಗಪ್ಪ ಮಾತನಾಡಿ, ನಮ್ಮ ವಾರ್ಡಿನಲ್ಲಿ ವಿದ್ಯುತ್ ಕಂಬಗಳು ಮನೆಯ ಮೇಲೆ ಹಾದು ಹೋಗಿವೆ. ಸ್ವಲ್ಪ ಯಾಮಾರಿದರೂ ತಲೆಗೆ ಬಡಿಯುತ್ತವೆ. ಇದರಿಂದ ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ ? ಎಂದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿ, ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳನ್ನು ಬಿಚ್ಚಿಟ್ಟರು. ಇದಕ್ಕೆ ಜೆಸ್ಕಾಂ ಅಧಿಕಾರಿ ಹನುಮಂತಪ್ಪ ಮೇಟಿ ಉತ್ತರಿಸಿ, ನಗರದಲ್ಲಿ ಈಗಾಗಲೇ 542 ಹೊಸ ಕಂಬಗಳನ್ನು ಅಳವಡಿಸಲಾಗಿದೆ. ಬೀದಿ ದೀಪಗಳ ವೈರ್‌ಗಳನ್ನು ಬದಲಾಯಿಸಲಾಗುತ್ತಿದೆ. ಎಲ್.ಟಿ.ಲೈನ್ ಸ್ಥಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಮನೆಗಳ ಮೇಲೆ ಹಾದುಹೋಗಿರುವ ವೈರ್‌ಗಳ ಮೇಲೆ ಕೇಬಲ್ ವೈರ್ ಹಾಕಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅಧ್ಯಕ್ಷ ಅಬ್ದುಲ್ ಖದೀರ್, ನಗರದ ಎಲ್ಲಾ 35 ವಾರ್ಡುಗಳಲ್ಲಿ ವಿದ್ಯುತ್ ಕಂಬ, ಕೇಬಲ್ ಅಳವಡಿಕೆ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸರ್ವೆ ನಡೆಸಿ, ಸದಸ್ಯರು, ಜೆಸ್ಕಾಂ ಅಧಿಕಾರಿ ಸೇರಿ ಚರ್ಚಿಸಿ ಸಮಸ್ಯೆ ಬಗೆಹರಿಸೋಣ ಎಂದರು.

ಸದಸ್ಯೆಮುಮ್ತಾಜ್ ಬೇಗಂ ಮಾತನಾಡಿ, ನಗರೋತ್ಥಾನ ಯೋಜನೆಯಡಿ ನಗರದ 35 ವಾರ್ಡುಗಳಲ್ಲಿ ಎಲ್ಲಿ ಪ.ಜಾತಿಯವರು ಶೇ.45ರಷ್ಟು ಹೆಚ್ಚು ಇದ್ದಾರೋ, ಅಲ್ಲಿ ಅಭಿವೃದ್ದಿಗೆ ಅನುದಾನ ನೀಡುವ ನಿಯಮವಿದೆ. ಆದರೆ ಕೇವಲ ಕೆಲವರು ಸೇರಿ ಸಭೆಯಲ್ಲಿ ಚರ್ಚಿಸದೇ, ತಮಗೆ ಬೇಕಾದವರಿಗೆ ಅನುದಾನ ನೀಡುತ್ತಿದ್ದಾರೆ. ಈ ತಾರತಮ್ಯ ಹೋಗಲಾಡಿಸಿ, ಎಲ್ಲಾ ವಾರ್ಡುಗಳಲ್ಲಿ ಸರ್ವೇ ನಡೆಸಿ ಅನುದಾನ ಹಂಚಿಕೆಯಾಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸದಸ್ಯ ನೂರ್ ಜಹಾನ್, ಸೇರಿದಂತೆ ಇತರೆ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಎಇಇ ಮನ್ಸೂರ್‌ಅಹಮ್ಮದ್  ಪ್ರತಿಕ್ರಿಯಿಸಿ, ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಸದಸ್ಯ ರಾಮಚಂದ್ರಗೌಡ ಮಾತನಾಡಿ, ಹಂಪಿ ರಸ್ತೆಯಲ್ಲಿರುವ ಸ್ಮಶಾನ ಸುಮಾರು 20 ವಾರ್ಡುಗಳ ಜನ ಬಳಕೆ ಮಾಡುತ್ತಿದ್ದಾರೆ. ಅದಕ್ಕೆ ಎಲ್ಲಾ ಸದಸ್ಯರಿಂದ ತಲಾ ಒಂದು ಲಕ್ಷ ನೀಡಿದರೆ ಸ್ಮಶಾನದ ಅಭಿವೃದ್ದಿ ಮಾಡಬಹುದು. ಇದಕ್ಕೆ ಅಧ್ಯಕ್ಷರು ಸಹಕಾರ ನೀಡಬೇಕು ಎಂದರು. ಇದಕ್ಕೆ ಉತ್ತರಿಸಿದ ಅಬ್ದುಲ್ ಖದೀರ್, ಸಮಸ್ಯೆ ಈಡೇರಿಸುವ ಭರವಸೆ ನೀಡಿದರು.

ಚರ್ಚೆಯಲ್ಲಿ ತ.ಚಿದಾನಂದ, ರೂಪೇಶಕುಮಾರ್, ಶ್ರೀಧರನಾಯ್ಡು, ಕುಲ್ಲಾಯಪ್ಪ, ರೋಹಿಣಿ, ಕಣ್ಣಿ ಉಮಾದೇವಿ, ಎ.ಬಸವರಾಜ, ಬೆಲ್ಲದ ರೌಫ್, ರಾಮಕೃಷ್ಣ, ಚಂದ್ರಕಾಂತ ಕಾಮತ್, ಗುಡಗುಂಟಿ ಮಲ್ಲಿಕಾರ್ಜುನ, ನಾಗಲಕ್ಷ್ಮಮ್ಮ, ಅಂಜಿನಿ ಭಾಗವಹಿಸಿದ್ದರು.

ನಂತರ ಸಂಜೆ ಸ್ಥಾಯಿ ಸಮಿತಿ ಚುನಾವಣೆ ನಡೆಯುವ ಬಗ್ಗೆ ಘೋಷಿಸಲಾಯಿತು

LEAVE A REPLY

Please enter your comment!
Please enter your name here