ಜೆಡಿಎಸ್ ಕಾರ್ಯಕರ್ತರ ಸಭೆ, ಮುಖಂಡರ ವಿರುದ್ದ ಆಕ್ರೋಷ.

0
220

ಕೋಲಾರ / ಬಂಗಾರಪೇಟೆ ; ಬಂಗಾರಪೇಟೆ ಪತ್ರಕರ್ತರ ಭವನದಲ್ಲಿ ಸ್ಥಳೀಯ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು, ಮುಖಂಡರ ವಿರುದ್ದ ತಿರುಗಿ ಬಿದ್ದ ಕಾರ್ಯಕರ್ತರು, ಕಳೆದ ನಾಲ್ಕು ವರ್ಷಗಳಿಂದ ಸಭೆ ಕರೆದಿಲ್ಲ, ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ತಾಪಂ ಜಿಪಂ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಬಿ.ಫಾರಂ ನೀಡಿಲ್ಲ, ಚುನಾವಣೆ ಸಮಯ ಬಂದಾಗ ಮಾತ್ರ ಕಾರ್ಯಕರ್ತರು ನೆನೆಪು ಬರುತ್ತದೆ ಎಂದು ಹೇಳಿ ಸಭೆಯಲ್ಲಿದ್ದ ಮುಖಂಡರಿಗೆ ಹಿಗ್ಗಾಮುಗ್ಗಾ ತರಾಟೆ, ಮುಖಂಡ ಕೋಲಾರದ ಶ್ರೀಕೃಷ್ಣ ವಿರುದ್ದ ಬಹಿರಂಗ ಅಸಮಧಾನ ವ್ಯಕ್ತಪಡಿಸಿದ ಕಾರ್ಯಕರ್ತರು.ಕಾರ್ಯಕರ್ತರ ಅಸಮಧಾನ ದಿಂದ ಇಂದು ಆಯ್ಕೆ ಮಾಡಬೇಕಾದ ಪದಾಧಿಕಾರಿಗಳ ಪಟ್ಟಿಯನ್ಬು ಮುಂದೂಡಿದ ಮುಖಂಡರು, ಸಭೆಯಲ್ಲಿ ಕೋಲಾರ ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್, ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ವಡಗೂರ್ ನಾಗರಾಜ್, ಟಿಕೇಟ್ ಆಕಾಂಕ್ಷಿಗಳಾದ ಮಲ್ಲೇಶ್ ಬಾಬು, ಚೌಡಪ್ಪ, ಪುರಸಭೆ ಮಾಜಿ ಸದಸ್ಯ ಶಿವುಕುಮಾರ್ ಮತ್ತಿತ್ತರರು ಇದ್ದರು.

LEAVE A REPLY

Please enter your comment!
Please enter your name here