ಬಂದ್‌ಗೆ ಸಂಪೂರ್ಣ ಬೆಂಬಲ.

0
143

ಚಿಕ್ಕಬಳಾಪುರ:ಗುಡಿಬಂಡೆ:ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಒಕ್ಕೂಟದ ವತಿಯಿಂದ ಕರೆನೀಡಿದ್ದಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ಕನ್ನಡ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಸಾರಥ್ಯದಲ್ಲಿ) ಸಂಪೂರ್ಣ ಬೆಂಬಲದೊಂದಿಗೆ ಯಶಸ್ವಿಯಾಯಿತು.

ಮುಂಜಾನೆಯಿಂದಲೇ ಕನ್ನಡ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಸಾರಥ್ಯದಲ್ಲಿ)ಯ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಇನ್ನೂ ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿರಲಿಲ್ಲ. ಅಂಚೆ ಕಛೇರಿ ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಛೇರಿಗಳು ಬಂದ್ ಆಗಿದ್ದವು. ನಂತರ ತಹಸೀಲ್ದಾರ್‍ ನಂಜಪ್ಪ ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ಅಂಬರೀಶ್, ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಸಾರಥ್ಯದಲ್ಲಿ) ತಾಲ್ಲೂಕು ಅಧ್ಯಕ್ಷ ಮಂಜುನಾಥ, ಕನ್ನಡ ಸೇನೆಯ ಉಪಾಧ್ಯಕ್ಷ ಅಬ್ದುಲ್ ರಹಮಾನ್, ಪ್ರಧಾನ ಕಾರ್ಯದರ್ಶಿ ಕುಮಾರ್‍, ಸಂಘಟನಾ ಕಾರ್ಯದರ್ಶಿ ಎನ್.ವಿ.ಗಂಗಾಧರ್‍, ಪದಾಧಿಕಾರಿಗಳಾದ ಹರೀಶ್, ಬಾಲಾಜಿ, ಸಂಜಯ್, ಕೈಫ್, ನರೇಶ್ ಬಾಬು, ವರುಣ್, ಸುನೀಲ್ ಕುಮಾರ್‍ ಸೇರಿದಂತೆ ಹಲವಾರು ಇದ್ದರು.

LEAVE A REPLY

Please enter your comment!
Please enter your name here