ಬಂದ್ ಗೆ ನೀರಸ ಪ್ರತಿಕ್ರಿಯೆ…

0
95

ರಾಯಚೂರು.ಸಾಲ ಮನ್ನಾಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಬಂದ್ ಕರೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾಲಮನ್ನಾ ಮಾಡಬೇಕೆಂದು ರಾಜ್ಯಾದ್ಯಂತವಾಗಿ ಬಿಜೆಪಿಯಿಂದ ಬಂದ್ ಕರೆ ನೀಡಿದ್ದು ಹೈ.ಕ ಭಾಗದ ರಾಯಚೂರು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ಉಂಟಾಗಿದೆ.
ಜಿಲ್ಲೆಯ ೫ ತಾಲ್ಲೂಕಿನಲ್ಲಿ ಬಿಜೆಪಿ ಒರತುಪಡಿಸಿದರೆ ಯಾವ ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲವನ್ನು ನೀಡಿಲ್ಲ ವಿಶೇಷವಾಗಿ ರೈತ ಸಂಘಗಳು ಬಂದ್ ಗೆ ಬೆಂಬಲ ನೀಡದಿರುವುದು ಕಂಡು ಬಂದಿದೆ.

ನಗರದಲ್ಲಿ ಬೆಜೆಪಿ ಪ್ರತಿಭಟನಾ ರ್ಯಾಲಿ ನಡೆಸಿ ಒತ್ತಾಯ ಪೂರ್ವಕವಾಗಿ ಬಂದ್ ಮಾಡಲು ಮುಂದಾದರು ನಗರದ ಸರಾಫ್ ಬಜಾರ ನಿಂದ ರ್ಯಾಲಿ ನಡೆಸಿ ತೀನ್ ಕಂದಿಲ್ ವೃತ್ತ, ಮಹಾವೀರ ವೃತ್ತ, ಚಂದ್ರ ಮೌಳೇಶ್ವರ ವೃತ್ತ,ಗಾಂಧಿ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮೂಲಕ ಬಸವೇಶ್ವರ ವೃತ್ತದ ವರೆಗೆ ಮೆರವಣಿಗೆ ನಡೆಸಿ ಬಂದ್ ನಡೆಸಿದರು.
ಜಿಲ್ಲೆಯ ಮಾನವಿ, ಸಿಂದನೂರು,ಲಿಂಗಸೂಗುರು, ದೇವದುರ್ಗ, ರಾಯಚೂರು ನಲ್ಲಿ ಬಂದ್ ವಾತಾವರಣ ಕಂಡುಬಂದಿಲ್ಲ.ತಾಲ್ಲೂಕುಗಳಲ್ಲಿ ಬಿಜೆಪಿ ಪಕ್ಷ ಒರತು ಪಡಿಸಿದರೆ ಯಾವ ಸಂಘಟನೆಗಳು ಸಾತ್ ನೀಡಿಲ್ಲ.

ಬಿಜೆಪಿ ಬಂದ್ ಕರೆ ನೀಡಿದ ಪರಿಣಾಮ ನಗರದಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿರಲಿಲ್ಲ ,ಪೆಟ್ರೋಲ್, ಶಾಲಾ ಕಾಲೇಜುಗಳು ಮತ್ತು ಬಸ್ ಸಂಚಾರ ಎಂದಿನಂತೆ ಚಾಲನೆಯಲ್ಲಿದ್ದವು.
ಒಟ್ಟಾರೆಯಾಗಿ ಬಿಜೆಪಿ ಬಂದ್ ಕರೆಯಿಂದ ಜಿಲ್ಲೆಯಲ್ಲಿ ಯಾವುದೇ ಬಂದ್ ಆಗದಿರುವುದರಿಂದ ಜನ ಜೀವನಕ್ಕೆ ತೊಂದರೆಯಾಗಿಲ್ಲ.

LEAVE A REPLY

Please enter your comment!
Please enter your name here