ಬಜೆಟ್ ವಿರುದ್ಧ ಪ್ರತಿಭಟನೆ…

0
76

ರಾಯಚೂರು:ಸರಕಾರಿ ಶಾಲೆಗಳನ್ನ ಸಬಲೀಕರಣಕ್ಕೆ ಆದ್ಯತೆ ನೀಡಬೇಕಾದ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ, ಶಾಲೆಗಳನ್ನ ಮುಚ್ಚುದಕ್ಕೆ ಮುಂದಾಗಿರುವ ಸರಕಾರ ನಿರ್ಧಾರವನ್ನ ಖಂಡಿಸಿ ರಾಯಚೂರಿನ ಪ್ರತಿಭಟನೆ ನಡೆಸಲಾಯಿತು. ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿದ್ರು. ಬಡ ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿರುವ ಸರಕಾರಿ ಶಾಲೆಯನ್ನ ಬಲವರ್ಧನೆಗೆ ಪ್ರಥಮ ಪ್ರಸ್ತತ್ಯೆ ನೀಡಬೇಕು. ಆದ್ರೆ ಬದಲಾಗಿ ಪ್ರಾಥಮಿಕ ಶಾಲೆ, ಪೌಢ, ವಿಶ್ವವಿದ್ಯಾಲಯಗಳು ಕಟ್ಟಡ ದುರಸ್ತಿ ೧೫೦ ಕೋಟಿ ಮೀಸಲು ಇರಿಸಿಲಾಗಿದೆ. ಆದ್ರೆ ಕಳೆದ ೨೦೧೬-೨೦೧೭ ಸಾಲಿನ ಆಯವ್ಯಯದಲ್ಲಿ ೭೩ಕ್ಕೂ ಹೆಚ್ಚು ಸರಕಾರಿ ಶಾಲೆಗಳ ಕೊಠಡಿಗಳ ದುರಸ್ತಿಗೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡಲಾಗಿದ್ದು, ಅದರ ಸದ್ಭಳಕೆ ಸರಿಯಾಗಿಲ್ಲ. ಈಗ ಪುನಃ ದುರಸ್ತಿ ಕೋಟ್ಯಾಂತ ಮೀಸಲು ಇಡಲಾಗಿದೆ ದೂರಿದ್ರು. ಮೈತ್ರಿ ಸರಕಾರ ಮೊದಲ ಬಜೆಟ್‌ನಲ್ಲಿ ಸರಕಾರ ಶಾಲೆಗಳನ್ನ ಮುಚ್ಚುದಕ್ಕೆ ಮುಂದಾಗಿರುವ ಸರಕಾರ ಕ್ರಮ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಕೂಡಲೇ ಕೈಬಿಟ್ಟು, ಶಾಲೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಖಾಂತರ ಸಿಎಂ ಮನವಿ ಸಲ್ಲಿಸಿದ್ರು.

LEAVE A REPLY

Please enter your comment!
Please enter your name here