ಬಡಜನರ ಕಲ್ಯಾಣಕ್ಕೆ ಸರ್ಕಾರಗಳು ನೀತಿ, ನಿಯಮ ರೂಪಿಸಬೇಕಿದೆ..

0
186

ಬಳ್ಳಾರಿ/ಹೊಸಪೇಟೆ:ಸಮಾಜದ ಎಲ್ಲಾ ವರ್ಗದ ಬಡ ಜನರ ಏಳ್ಗೆಗಾಗಿ ಸರ್ಕಾರಗಳು ಅಗತ್ಯ ಕಾನೂನು, ನೀತಿಗಳನ್ನು ರೂಪಿಸಲು ಚಿಂತನೆ ನಡೆಸಬೇಕು ಎಂದು ಉಡುಪಿ ಫಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ಎಲ್ಲ ವರ್ಗದ ಜನರಲ್ಲಿಯೂ ಬಡವರಿದ್ದು ಅವರೆಲ್ಲ ಕಲ್ಯಾಣಕ್ಕೆ ಅಗತ್ಯ ಕಾನೂನು, ನೀತಿಗಳನ್ನು ರೂಪಿಸುವುದು ಅಗತ್ಯವಿದೆ.ಕಾಯಿದೆ, ಕಾನೂನುಗಳ ಬಗ್ಗೆ ಹೆಚ್ಚಿನದ್ದು ಏನನ್ನು ಹೇಳಲು ಬಯಸುವುದಿಲ್ಲ. ಆದರೆ ಸಮಾಜದ ನಾನಾ ಸಮುದಾಯಗಳಲ್ಲಿಯೂ ಬಡಜನರಿದ್ದಾರೆ. ಅಂತಹವರ ಸಮಗ್ರ ಅಭಿವೃದ್ಧಿ ಬಗ್ಗೆಯೂ ಆಳ್ವಿಕೆ ನಡೆಸುವ ಸರಕಾರಗಳು ಗಮನಹರಿಸಬೇಕು. ಎಲ್ಲವನ್ನೂ ಮೌಢ್ಯ ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ಮೌಢ್ಯ, ಯಾವುದು ಅಲ್ಲ ಎಂಬುದನ್ನು ಮೊದಲ ಅರಿಯಬೇಕು. ಪೂಜೆ, ಆಚಾರ, ವಿಚಾರಗಳು ಮೌಢ್ಯ ಅಲ್ಲ ಎಂದರು.2018ರ ಜನವರಿ 18ರಿಂದ ಉಡುಪಿಯಲ್ಲಿ 3ನೇ ಪರ್ಯಾಯ ಪೀಠಾರೋಹಣ ಮಹೋತ್ಸವ ನಿಮಿತ್ತ ಶ್ರೀಕೃಷ್ಣ ಮಠದ ಚಾವಣಿಗೆ ತಿರುಪತಿ ಮಾದರಿಯಲ್ಲಿಯೇ ಬಂಗಾರದ ಹೋದಿಕೆ ಅಳವಡಿಸಲಾಗುವುದು. ಇದನ್ನು ಕೆಲವರು ವ್ಯರ್ಥ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ನೋಟ್‌ಗಳು ರದ್ದಾದಲ್ಲಿ ಮೌಲ್ಯ ಕಳೆದುಕೊಳ್ಳುತ್ತದೆ. ಆದರೆ ಬಂಗಾರ ಕೇವಲ ಮಠದ ಆಸ್ತಿ ಮಾತ್ರವಲ್ಲದೆ ಅದು ಈ ನಾಡಿನ ಹಾಗೂ ರಾಜ್ಯದ ಸಂಪತ್ತು ಆಗಲಿದೆ. ಅದು ಇಂದೆಲ್ಲ ನಾಳೆ ದೇಶದ ಅಮೌಲ್ಯ ಸಂಪತ್ತಾಗಿ ಉಳಿಯಲಿದೆ ಎಂದು ಹೇಳಿದರು.ಕಳೆದ ಎರಡು ಪರ್ಯಾಯ ಅವಧಿಯಲ್ಲಿ ಉಡುಪಿ ಸುತ್ತಮುತ್ತಲಿನ 8ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮೊಬೈಲ್ ಆಸ್ಪತ್ರೆಗಳನ್ನು ಆರಂಭಿಸಲಾಗಿತ್ತು. ಈ ಬಾರಿ ಪರ್ಯಾಯದ ಎರಡು ವರ್ಷದ ಅವಧಿಯಲ್ಲಿಯೂ ನಾನಾ ಹಳ್ಳಿಗಳಲ್ಲಿ ಮಠದಿಂದಲ್ಲೇ ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ನಾನಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.ಪರ್ಯಾಯದ ಎರಡು ವರ್ಷದ ಅವಧಿಯಲ್ಲಿ ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸುವವರಿಗೆ ಎಲ್ಲ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು. ಈ ಅವಧಿಯಲ್ಲಿ ನಾಡಿ ರೈತ ಬಾಂಧವರಲ್ಲಿ ನೆಮ್ಮದಿ ತರಲು ಉತ್ತಮ ಮಳೆ, ಬೆಳೆಯಾಗಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಗುವುದು ಎಂದರು. ಉಡುಪಿ ಅದಮಾರು ಮಠದ ಕಿರಿಯ ಸ್ವಾಮೀಜಿ ಶ್ರೀಈಶ ಪ್ರಿಯ ತೀರ್ಥ ಸ್ವಾಮೀಜಿ ಇದ್ದರು.

LEAVE A REPLY

Please enter your comment!
Please enter your name here