ಬಡವರಿಗಾಗಿ ನಾಗರಿಕ ಸೌಲಭ್ಯ ಸಂಕೀರ್ಣ

0
1478

ಬೆಂಗಳೂರು/ಕೃಷ್ಣರಾಜಪುರ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಡವರೇ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗುವುದರಿಂದ ಅವರಿಗೆ ಅನುಕೂಲವಾಗಲು ನಾಗರಿಕ ಸೌಲಭ್ಯ ಸಂಕೀರ್ಣ ಸ್ಥಾಪಿಸಿದೆ ಎಂದು ಬಿ.ಎ.ಬಸವರಾಜ್ ತಿಳಿಸಿದರು.

ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರಿಕ ಸೌಲಭ್ಯ ಸಂಕೀರ್ಣವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ನಗರದಲ್ಲಿ ಶ್ರೀಮಂತರಿಗಿಂತ ಬಡವರೇ ಹೆಚ್ಚಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಮರ್ಥರಿರುವುದಿಲ್ಲ, ಸಾರ್ವಜನಿಕ ಆಸ್ಪತ್ರೆಗಳನ್ನೇ ಹೆಚ್ಚಾಗಿ ಚಿಕಿತ್ಸೆಗೆ ಅವಲಂಬಿಸಿರುತ್ತಾರೆ, ಚಿಕಿತ್ಸೆಗೆ ವೆಚ್ಚ ತಗಲದಿದ್ದರೂ ಔಷದಿಗಳಿಗೆ ಮತ್ತು ಆಹಾಕ್ಕೆ ಹಾಗು ರೋಗದಿಂದ ಚೇತರಿಸಿಕೊಳ್ಳಲು ಹಣ್ಣ ಹಾಲಿನ ಅವಶ್ಯಕತೆಯಿರುತ್ತದೆ, ಆದರೆ ನಿತ್ಯದ ಊಟಕ್ಕಷ್ಟೇ ಹಣ ಒದಗಿಸಲಬಲ್ಲ ಕೂಲಿ ಕಾಮರ್ಿಕರಿಗೆ ಆರೋಗ್ಯದಲ್ಲಿ ಏರು ಪೇರಾದರೆ ಚೇತರಿಸಿಕೊಳ್ಳುವ ಸಲುವಾಗಿ ಸಕರ್ಾರ ನಾಗರಿಕ ಸೌಲಭ್ಯ ಸಂಕೀರ್ಣಗಳನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಿಮರ್ಿಸಿದೆ, ಈ ಸಂಕೀರ್ನಗಳಲ್ಲಿ ಔಷಧಿಗಳು, ಹಣ್ಣ ಹಂಪಲು ಮತ್ತು ಹಾಲು ಹಾಗು ಆಹಾರವೂ ಸಹಿತ ದೊರೆಯಲಿದ್ದು, ಸುಸಜ್ಜಿತ ಶೌಚಾಲಯಗಳೂ ಸಹ ಲಭ್ಯವಿರಲಿದ್ದು, ಮಾರುಕಟ್ಟೆಯ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ, ಇಲ್ಲಿ ದೊರೆಯುವ ಸೌಲಭ್ಯಗಳು ರೋಗಿಗಳ ಆರೋಗ್ಯ ಚೇತರಿಕೆಗೆ ಅನುವಾಗಲಿದೆ ಎಂದರು. ಸಕರ್ಾರ ನಗರದ 198 ವಾಡರ್್ಗಳಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ ಬುಧುವಾರದಂದು ಚಾಲನೆ ದೊರೆಯಲಿದ್ದು ನಗರದಲ್ಲಿ ನೆಲೆಸಿರುವ ಬಡವರು ಮತ್ತು ವಲಸಿಗರು ಕೂಲಿ ಕಾಮರ್ಿಕರು ಕಡಿಮೆ ದರದಲ್ಲಿ ಆಹಾರ ಸೇವಿಸಲು ಸಾಧ್ಯವಾಗಲಿದ್ದು, ಪ್ರತಿಯೊಬ್ಬ ಬಡವನೂ ಸಹಿತ ಹಸಿವು ಮುಕ್ತನಾಗಲಿದ್ದಾನೆಂದರು.

ಕೆಆರ್.ಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂಬರುವ ದಿನಗಳಲ್ಲಿ ಡಯಾಲಿಸಿಸ್ ಕೇಂದ್ರ ಹಾಗು ತುರ್ತು ಚಿಕಿತ್ಸಾಘಟಕಸ್ಥಾಪಿತವಾಗಲಿದ್ದು, ಕೇವಲ ಖಾಸಗೀ ಅಥವಾ ನಗರದ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯ ವಿರುತ್ತಿದ್ದ ಸೌಕರ್ಯಗಳು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಲಭ್ಯವಾಗಲಿದ್ದು, ಬಡ ರೋಗಿಗಳು ಕಡಿಮೆ ವೆಚ್ಚದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರ ಶೇಖರ್, ಪಾಲಿಕೆ ನಾಮ ನಿರ್ಧೇಶಿತ ಸದಸ್ಯ ಅಂತೋಣಿ ಸ್ವಾಮಿ, ಶಿವಪ್ಪ, ಮುನಿಯಪ್ಪ ಸೇರಿದಂತೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here