ಬಡವರಿಗಿಲ್ಲಾ ಪೊಲೀಸರಿಂದ ರಕ್ಷಣೆ…

0
169

ಬೆಂಗಳೂರು/ಮಹದೇವಪುರ:- ಇತ್ತೀಚೆಗೆ ನಗರದ ಮಾರತ್ಹಳ್ಳಿ ಸಮೀಪ ಕಳ್ಳರೆಂದು ಆರೋಪಿಸಿ ಕರೆಂಟ್ ಶಾಕ್ ನೀಡಿ ಚಿತ್ರ ಹಿಂಸೆ ಕೊಟ್ಟು ಒಬ್ಬನ ಕೊಲೆಗೈದು, ಇನ್ನಿಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದ್ದ ಪ್ರಕರಣ ಸಂಭಂದ ಈಗ ಹೊಸ ತಿರುವು ಪಡೆದುಕೊಂಡಿದೆ. ಚಿತ್ರಹಿಂಸೆ ಅನುಭವಿಸಿದವರಿಗೇ ಶಿಕ್ಷೆ ಆದಂತಾಗಿದೆ, ಅನುಮಾನಾಸ್ಪದ ರೀತಿಯಲ್ಲಿ ನೂರಾರು ಶೆಡ್ಗಳು ಖಾಲಿ ಆಗಿವೆ.
ಕಳ್ಳತನ ಮಾಡಿದ್ದಾರೆ ಎಂಬ ಆರೋಪದಡಿ ವೆಸ್ಟ್ ಬೆಂಗಾಲ ಮೂಲದ ಮೂವರು ಯುವಕರನ್ನು ಕುಂದಲಹಳ್ಳಿ ಮೂಲದ ಉದ್ಯಮಿ ವಾಸುದೇವರೆಡ್ಡಿ ಎಂಬುವವರು ವೆಸ್ಟ್ ಬೆಂಗಾಲ್ ಮೂಲದ ಮೂವರು ಯುವಕರನ್ನು ತಾವು ವಾಸವಿದ್ದ ಗುಡಿಸಿಲಿನಿಂದ ಎಳೆದೋಯ್ದು ಹಲ್ಲೆ ನಡೆಸಿದ್ದರು, ಮನ ಬಂದಂತೆ ತಳಿಸಿ ವಿದ್ಯುತ್ ಶಾಕ್ ನೀಡಿದ್ದರು, ಇದರಿಂದ ಬಷೀರ್ ಎಂಬ ಯುವಕ ಸ್ಥಳದಲ್ಲೆ ಸಾವನ್ನಪ್ಪಿದರೆ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ನಿನ್ನೆ ರಾತ್ರಿಯಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ವಾಸವಿದ್ದ ಗುಡಿಸಲು ಬಳಿತೆರಳಿದ್ದಾರೆ, ನಂತರ ಏನಾಯ್ತು ಗೊತ್ತಿಲ್ಲ ಅಲ್ಲಿದ್ದ ನೂರಾರು ಗುಡಿಸಲುಗಳ ವಾಸಿಗಳು ರಾತ್ರೋರಾತ್ರಿ ಕಾಲ್ಕಿತ್ತಿದ್ದಾರೆ, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೈಟ್; ಮಾಪುಜಾ ಬೇಬಿ ಗಾಯಾಳುವಿನ ಸಂಭಂದಿ.
ಇಂತಹ ಗಂಭೀರ ಪ್ರಕರಣ ನಡೆದಿದ್ದರೂ ಪೊಲೀಸರು ಮಾತ್ರ ಇನ್ನು ಆರೋಪಿಗಳನ್ನು ಬಂಧಿಸಿಲ್ಲ, ಪೊಲೀಸರ ನಿರ್ಲಕ್ಷದಿಂದ ಬಡವರು ಭಯದಿಂದ ಮನೆ ಮಠ ಖಾಲಿ ಮಾಡಿದ್ದಾರೆ, ಒಂದು ಮಾಹಿತಿ ಪ್ರಕಾರ ಸಾವನ್ನಪ್ಪಿದವರ ಕುಟುಂಬಕ್ಕೆ ಮತ್ತು ಪೊಲೀಸರಿಗೆ ಹಣದ ಆಮಿಶ ಒಡ್ಡಿರುವ ಶಂಖೆ ವ್ಯಕ್ತವಾಗಿದೆ, ಬಡವರ ಪ್ರಾಣಕ್ಕೂ ಪೊಲೀಸರು ಬೆಲೆ ಕಟ್ಟುವ ಹೀನ ಕೃತ್ಯಕ್ಕೆ ಕೈಹಾಕಿದ್ದಾರೆಂಬ ಗುಸು ಗುಸು ಸುದ್ದಿಗಳು ಹರಿದಾಡುತ್ತಿವೆ, ಇಂದು ಕರ್ನಾಟಕ ಕೋಮು ಸೌಹಾರ್ದ ವೇಧಿಕೆ, ಪೀಪಲ್ ಡೆಮಾಕ್ರಟಿಕ್ ಪಾರ್ಟಿ, ಮೂಮೆಂಟ್ಸ್ ಫಾರ್ ರೈಟ್ಸ್ ಸೇರಿದಂತೆ ಕೆಲ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಸ್ಥಳಕ್ಕೆ ಬೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು. ಏಕಾಏಕಿ ಖಾಲಿ ಆಗಲು ಕಾರಣ ಅವರಲ್ಲಿನ ಭಯವೇ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದರು. ಇನ್ನು ಈ ಪ್ರಕರಣ ತಪ್ಪುದಾರಿ ಹಿಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸ್ವಯಂಸೇವಾ ಸಂಸ್ತೆಗಳ ಸದಸ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಬೈಟ್; ನಗರಿ ಬಾಬಾ ಸ್ವಯಂ ಸೇವಾ ಸಂಸ್ತೆಯ ಸದಸ್ಯ.
ಒಟ್ಟಾರೆ ಬಡ ಕೂಲಿ ಕಾಮರ್ಿಕರಿಗೆ ಸೂಕ್ತ ಭದ್ರತೆ ಇಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ, ಪ್ರಕರಣ ನಡೆದು 6 ದಿನಗಳೇ ಕಳೆದರೂ ಇನ್ನೂ ಆರೋಪಿಗಳನ್ನು ಬಂಧಿಸದಿರುವುದು ಪೊಲೀಸರ ಮೇಲಿ ಅನುಮಾನ ಹೆಚ್ಚಿಸಿದೆ ಆದಷ್ಟು ಬೇಗನೆ ಈ ಹೀನಾಯ ಕೃತ್ಯದ ಆರೋಪಿಗಳನ್ನು ಬಂಧಿಸ ಬೇಕಾಗಿದೆ.
ಇನ್ನು ಈ ಸಂಭಂದ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು ಪ್ರಮುಖ ಆರೋಪಿ ವಾಸುದೇವರೆಡ್ಡಿಯನ್ನು ಬಂಧಿಸಿದ್ದು ಇನ್ನುಳಿದ 8 ಜನ ತಲೆ ಮರೆಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here