ಬದಲಿ ಭೂಮಿ ನೀಡುವಂತೆ ರೈತರ ಆಗ್ರಹ.

0
183

ಬಳ್ಳಾರಿ / ಹೊಸಪೇಟೆ; ಕಮಲಾಪುರ ಕೆರೆ ಅಂಗಳದ ರೈತರಿಗೆ ಬದಲಿ ಭೂಮಿ ನೀಡಿ-ರೈತರ ಆಗ್ರಹ

ತಾಲ್ಲೂಕಿನ ಐತಿಹಾಸಿಕ ಕಮಲಾಪುರ ಕೆರೆ ಅಂಗಳದ ಭೂಮಿ ವಂಚಿತ ಕೃಷಿಕರಿಗೆ ಬೇರೆಡೆ ಭೂಮಿ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಕಮಲಾಪುರದ ಕೆರೆ ತಾಂಡದ ರೈತರು, ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಕೆರೆತಾಂಡದ ಲಂಬಾಣಿ ಜನ ಹಾಗೂ ಗಿರಿಜನ ನಿವಾಸಿಗಳು ಕೆರೆ ಅಂಗಳದಲ್ಲಿ ಒಕ್ಕಲೆಬ್ಬಿಸಿರುವ ರೈತರಿಗೆ ಬದಲಿ ಭೂಮಿಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಕಮಲಾಪುರ ಕೆರೆಯ ಹಿಂಭಾಗದ ಭೂಮಿಯಲ್ಲಿ ರೈತರು ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಸುಮಾರು 500ಕ್ಕೂ ಹೆಚ್ಚು ರೈತ ಕುಟುಂಬಗಳು ಬೀದಿಪಾಲು ಆಗಲಿದ್ದು, ಈ ಕೃಷಿ ಭೂಮಿಯನ್ನು ನೆಚ್ಚಿಕೊಂಡ ಹರಿಜನ ಮತ್ತು ಗಿರಿಜನ ಜನರ ಬದುಕು ಶೋಚನೀಯ ಸ್ಥಿತಿ ತಲುಪಲಿದೆ ಎಂದು ಅಳಲು ತೋಡಿಕೊಂಡರು.

ಸತತ ಬರಗಾಲದಿಂದ ತತ್ತಿರುವ ಈ ಭಾಗದ ರೈತರ ಪ್ರತಿ ಕುಟುಂಬಗಳಿಗೆ ಸರ್ಕಾರಿವತಿಯಿಂದ ಬೇರೆಡೆ ಭೂಮಿಯನ್ನು ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕೆರೆ ತಾಂಡದ ರೈತರು ಸಾಮೂಹಿಕವಾಗಿ ವಿಷ ಸೇವನೆ ಮಾಡಿ, ಸಾಯಲು ಹಿಂಜರಿಯುದಿಲ್ಲ ಎಂದು ಪ್ರತಿಭಟನಾಕಾರರು, ಎಚ್ಚರಿಸಿದರು.

ಮತ್ತೂ ಕೆರೆ ಅಂಗಳದಲ್ಲಿ ಭೂಮಿ ಕಳೆದ ಕೊಂಡ ರೈತರ ಕುಟುಂಬಗಳಿಗೆ ಕಮಲಾಪುರ ಸುತ್ತಮುತ್ತ ಇರುವಂತ ಸರ್ಕಾರಿ ಇಲಾಖೆ, ಜಂಗಲ್ ಲಾಡ್ಜ್, ಅಟಲ್ ಬಿಹಾರಿ ಜೂವೆಲ್ಲರ್ ಪಾರ್ಕ ಇತರೆ ಕಡೆ ಉದ್ಯೋಗಾವಕಾಶವನ್ನು ಕಲ್ಪಿಸಬೇಕು. ಸರ್ಕಾರಿ ಭೂಮಿಗಳಲ್ಲಿ ತೆರವುಗೊಳಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ತಲಾ 2.00 ಎಕರೆ ಭೂಮಿ ನೀಡಬೇಕು. ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಅನುವು ಮಾಡಿಕೊಡಬೇಕು.ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಕರೆ ಭೂಮಿಯನ್ನು ಸಾಗುವಳಿ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಗ್ರಾಮದ ಮುಖಂಡರಾದ ಜಾನ್ಯಾನಾಯ್ಕ, ಗಂಗಾನಾಯ್ಕ, ಹೆಮಗಿರಿನಾಯ್ಕ, ಸಾಮ್ಯಾನಾಯ್ಕ, ಪ್ರೀತಮ್ ಕುಮಾರ್, ಗಂಗಪ್ಪ, ಯಮುನಾ ನಾಯ್ಕ, ಕುಮಾರ್‌ನಾಯ್ಕ, ಬಿಲ್ಯಾನಾಯ್ಕ, ಮುನಿಯಾನಾಯ್ಕ, ರಾಮುನಾಯ್ಕ, ಗೋವಿಂದನಾಯ್ಕ ಇತರರಿದ್ದರು.

ಜನ ಸಂಗ್ರಾಮ್ ಪರಿಷತ್ ಮುಖಂಡ ಶಿವಕುಮಾರ ಮಾಳಗಿ ಹಾಗೂ ಗಂಡುಗಲಿ ರಾಮ ಕುಮಾರರಾಮ ಯುವಸೇನೆ ಮುಖಂಡರು, ಕೆರೆ ಅಭಿವೃದ್ಧಿ ಹಾಗೂ ಒತ್ತುವರಿಗೆ ತೆರುವಿಗೆ  ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್ ಅವರಲ್ಲಿ ಕಳೆದ ಮೇನಲ್ಲಿ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು, ಐತಿಹಾಸಿಕ ಕಮಲಾಪುರ ಕೆರೆ ಅಂಗಳದಲ್ಲಿ ಸರ್ವೇ ಕಾರ್ಯ ನಡೆಸುವ ಮೂಲಕ ಒತ್ತುವರಿ ತೆರುವಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಂದಾಯ ಹಾಗೂ ನೀರಾವರಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು, ಕೆರೆಯ ಅಷ್ಟೂ ಪ್ರದೇಶದಲ್ಲಿ ಸರ್ವೇ ಕಾರ್ಯ ನಡೆಸಿ, ಬೌಂಡರಿ ಕಲ್ಲು ಹಾಕುವ ಮೂಲಕ ಗಡಿಯನ್ನು ಗುರುತು ಮಾಡಿದ್ದರು.

ಕೆರೆ ಒಟ್ಟು 470 ಪ್ರದೇಶದಲ್ಲಿ ಸುಮಾರು 200 ಎಕರೆ ಪ್ರದೇಶ ಒತ್ತುವರಿಯಾಗಿದನ್ನು ಪರಿಶೀಲಿಸಿದ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದರು. ಕೆರೆಯ ಒತ್ತುವರಿ ತೆರವಿಗೆ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಕೆರೆ ತಾಂಡದ 500ಕ್ಕೂ ರೈತ  ಕುಟುಂಬಗಳು ಬೀದಿಗೆ ಬರಲಿದ್ದು, ಕೂಡಲೇ ಬದಲಿ ಭೂಮಿಯನ್ನು ಸರ್ಕಾರ ನೀಡಬೇಕು ಎನ್ನುವುದು ಕೆರೆ ತಾಂಡ ರೈತರ ಒಕ್ಕೂರಲಿನ ಬೇಡಿಕೆಯಾಗಿದೆ.

LEAVE A REPLY

Please enter your comment!
Please enter your name here