ಬರ್ಮಾ ಹತ್ಯಾಕಾಂಡ ಖಂಡಿಸಿ ಪ್ರತಿಭಟನೆ

0
233

ಕಲಬುರ್ಗಿ/ಅಫಜಲಪೂರ: ತಾಲ್ಲೂಕಿನಲ್ಲಿ ಬರ್ಮಾದಲ್ಲಿ ಮಸ್ಲಿಮರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹತ್ಯೆ ತಡೆಯಬೇಕೆಂದು ಆಗ್ರಹಿಸಿ ಎಂ.ಐ.ಎಂ. ಪಕ್ಷದ ಕಾರ್ಯಕರ್ತರು ಅಫಜಲಪೂರ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿದ್ದರು ನಂತರ ತಾಲ್ಲೂಕು ಅಧ್ಯಕ್ಷರಾದ ಮಂಜೂರ ಅಹ್ಮದ್ ಅಗರಖೇಡ ಮಾತನಾಡಿ ಇಸ್ಲಾಂಧರ್ಮ ಮಾನವೀಯತೆ ಮೌಲ್ಯಗಳ ಆಧಾರದಲ್ಲಿ ನಿರ್ಮಿತ ವಾಗಿದ್ದು. ಸದಾ ಶಾಂತಿ ಮತ್ತು ಸಹೋದರತೆಯನ್ನು ಬಯಸುವ ಧರ್ಮವಾಗಿದೆ.ಆದರೆ ಬರ್ಮಾ ದೇಶದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಸಾಮೂಹಿಕ ಹತ್ಯಾಕಾಂಡ ನಡೆಯುತ್ತಿದ್ದರು ಅಲ್ಲಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಜೊತೆಗೆ ಇತ್ತೀಚೆಗೆ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯ ವಾಗಿದೆ ಎಂದರು.

ಈ ಸಂದರ್ಭದಲ್ಲಿ ಹುಸೇನಸಾಬ ಶೇಖ.ಇಸ್ಮಾಯಿಲ ಸಾಬ ಶೇಖ. ಅಲ್ಲಬಕ್ಷ ಮುಲ್ಲಾ. ಮೋಸಿನ ಮಡ್ನಳ್ಳಿ. ಯುಸುಫ್ ಸಾಬ ಮಕಾನದರ.ರಜಾಕಸಾಬ ಆಲಮೇಲಕರ.ರಾಜು ಆಳಂದಕರ.ಗಫೂರಸಾಬ ಚೌದರಿ. ಜಾವಿುದ ಮನಿಯಾರ.ಅಲ್ತಾಫ ಅಪರಾಧ. ಸದ್ದಾಮ ಚೌದರಿ. ಅಲ್ತಾಫ ಮಸಳಿ. ಗುಡುಸಾಬ ಹಟ್ಟಿ. ಸೇರಿದಂತೆ ಹಲವಾರು ಜನ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು

LEAVE A REPLY

Please enter your comment!
Please enter your name here