ಬರ ನಿರ್ವಹಣೆ ಬಗ್ಗೆ ಜಿಲ್ಲಾಧಿಕಾರಿ ಸಭೆ

0
174

ಮಂಡ್ಯ/ಮಳವಳ್ಳಿ: ಅಕ್ರಮ ಕುಡಿಯುವ ನೀರಿನ ಸಂಪರ್ಕಗಳಿಗೆ ಕಡಿವಾಣ ಹಾಕಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕ್ಕದ್ದಮೆ ಹಾಕುವಂತೆ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ

ಮಳವಳ್ಳಿ ನಗರದದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಬರ ನಿವ೯ಹಣೆ ಕುರಿತು ಸಭೆಯಲ್ಲಿ ಮಾತನಾಡಿದ ಅವರು ಅಕ್ರಮ ಸಂಪರ್ಕ ಗಳನ್ನು ಕೂಡಲೇ ರದ್ದುಪಡಿಸಿ ನೀರಿನ ಬಳಕೆಯನ್ನು ಮಿತವಾಗಿ ಬಳಸುವುದರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು .

ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ನೀರಿನ ಬೋರ್ ವೆಲ್ ಕೆಟ್ಟಿದ್ದರೆ ತಕ್ಷಣ ಪಿಡಿಒ ಗಳಿಗೆ ಅಥವಾ ತಾ.ಪಂ ಇಒ ಗೆ ತಿಳಿಸಿ ಅವರು ತಕ್ಷಣ ನೀರಿನ ಸಮಸ್ಯೆ ಬರದಂತೆ ಕ್ರಮವಹಿಸಲಿದ್ದಾರೆ. ತಾಲ್ಲೂಕಿನ ಹಾಡ್ಲಿ, ಕಂಸಾಗರ, ಮುಡಕನಪುರ .ಮಲಿಯೂರು, ಪೂರಿಗಾಲಿ, ಹಲಗೂರು, ಟಿ.ಕೆ ಹಳ್ಳಿ,ಬ್ಯಾಡರಹಳ್ಳಿ ಮತ್ತು ಕಂದೇಗಾಲ ಗ್ರಾಮಗಳಲ್ಲಿ ನೀರಿನ ಅಭಾವದ ದೂರುಗಳು ಬಂದಿದ್ದು, ಈ ಬಗ್ಗೆ ಕ್ರಮ ‌ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಎಚ್ಚರವಹಿಸಿ, ಲೋಪ ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇನೆ. ಜಾನುವಾರುಗಳಿಗೆ ನೀರು ಮೇವಿನ ವ್ಯವಸ್ಥೆ ಯನ್ನು ತಾಲ್ಲೂಕು ಆಡಳಿತ ಸಮಪ೯ಕವಾಗಿ ನೋಡಿಕೊಂಡು ಕೆಲಸ ನಿವ೯ಹಿಸುವಂತೆ ತಹಸೀಲ್ದಾರ್ ಗೂ ಸೂಚನೆ ನೀಡಿದರು.

ಸಭೆಯಲ್ಲಿ ತಾ.ಪಂ ಆರ್.ಎನ್ ವಿಶ್ವಾಸ್,ಉಪಾಧ್ಯಕ್ಷ ಮಾಕಾ೯ಲು ಮಾಧು.ಜಿ.ಪಂ ಸದಸ್ಯರಾದ ಹನುಮಂತು . ಸುಷ್ಮಾರಾಜು, ಸುಜಾತಸುಂದ್ರಪ್ಪ, ಚಂದ್ರಕುಮಾರ್, ರವಿ.ಜಿ.ಪಂ ಸಿಇಓ ಶರತ್, ತಹಸೀಲ್ದಾರ್ ದಿನೇಶ್ ಚಂದ್ರ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ, ಸೇರಿದಂತೆ ತಾಲ್ಲೂಕಿನ ಎಲ್ಲಾ ಪಿಡಿಒಗಳು ಹಾಜರಿದ್ದರು

LEAVE A REPLY

Please enter your comment!
Please enter your name here